ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಣೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ದಿವಂಗತರಾದ ಕ್ಲಬ್ಬಿನ ಉಪಾಧ್ಯಕ್ಷ ಸಾಲ್ವಡೊರ್ ನೊರೊನ್ಹಾ ಹಾಗೂ ಕ್ಲಬ್ಬಿನ ಸದಸ್ಯರಾಗಿದ್ದ ಜಯರಾಜ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಕ್ಲಬ್ಬಿನ ಒಳಾಂಗಣದಲ್ಲಿ ಆಯೋಜಿಸಿದ ಈ ಸಂತಾಪ ಸಭೆಯಲ್ಲಿ ಪ್ರೊಫೆಸರ್ ಕೆ ನಾರಾಯಣನ್, ಜಿ ಬಾಲಕೃಷ್ಣ ಶೆಟ್ಟಿ , ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿಯವರು ಅಗಲಿದ ಮಹನೀಯರನ್ನು ಹಾಗೂ ಅವರ ಸೇವೆಯನ್ನು ನೆನಪಿಸಿಕೊಂಡು ಅವರಿಗೆ ಶ್ರದ್ಧಾಂಜಲಿ ಕೋರಿದರು.ಇದೆ ಸಂಧರ್ಭದಲ್ಲಿ ಮಾತನಾಡಿದ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಎಂ ಚಂದ್ರಶೇಖರ್ ಹೆಗ್ಡೆಯವರು, ಅವರ ಹಾಗೂ ನೊರೊನ್ಹಾರವರ 50 ವರುಷಗಳ ಸ್ನೇಹವನ್ನು ನೆನಪಿಸಿಕೊಂಡು ಅವರ ಅನುಭವಗಳನ್ನು ಹಂಚಿಕೊಂಡರು. ಉಪಾಧ್ಯಕ್ಷರಾಗಿದ್ದ ನೊರೊನ್ಹಾರವರ ಸರಳ, ಸಜ್ಜನ ಹಾಗೂ ಪರೋಪಕಾರಿ ವ್ಯಕ್ತಿತ್ವವದ ಹಲವು ಉಧಾರಣೆಗಳನ್ನು ನೆನಪಿಸಿ ಈ ಅಜಾತಶತ್ರುವಿಗೆ ಶ್ರಧಾಂಜಲಿ ಕೋರಿದರು.

ಸಾಲ್ವಡೊರ್ ನೊರೊನ್ಹಾರವರು, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೆ ನೀಡಿದ ಸೇವೆಯನ್ನು ಗುರಿತಿಸಿ , ಕೆಲವೇ ದಿನಗಳಲ್ಲಿ ಕ್ಲಬ್ಬಿನ ಆವರಣದಲ್ಲಿ ಉದ್ಘಾಟನೆ ಹೊಂದಲಿರುವ ಹೊಸ ಈಜು ಕೊಳಕ್ಕೆ ‘ಸಾಲ್ವಡೊರ್ ನೊರೊನ್ಹಾ’ರವರ ಸ್ಮಾರಕವಾಗಿ ನಾಮಕರಿಸುವ ಪ್ರಸ್ತಾಪ ಮಂಡಿಸಲಾಯಿತು. ನೆರೆದಿರುವ ಸರ್ವ ಸದಸ್ಯರು ಈ ಸಲಹೆಯನ್ನು ಸ್ವಾಗತಿಸಿ , ಸರ್ವಾನುಮತಿಯಿಂದ ಒಪ್ಪಿಗೆ ನೀಡಿದರು.

1976 ರಿಂದ 2014 ವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಎಸ್ ಎಂ ಎಸ್  ಕಾಲೇಜಿನಲ್ಲಿ ಸೇವೆ ನೀಡಿದ ನೊರೊನ್ಹಾರವರು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಕಳೆದ ಮೇ 19ರಂದು ಕೊರೊನ ರೋಗದಿಂದ ಉಂಟಾಗಿರುವ ಅರೋಗ್ಯ ಸಮಸ್ಯೆಗಳಿಂದ ಅವರು ನಿಧನ ಹೊಂದಿದರು.

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾಗಿದ್ದ ಗ್ರೆಗೊರಿ ಡಿಸಿಲ್ವರವರು ಮಾತನಾಡಿ ಅಗಲಿದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿದರು ಹಾಗೂ ಹಾಜರಿದ್ದ ಎಲ್ಲರಿಗೆ ಧನ್ಯವಾದ ಅರ್ಪಣೆ ಮಾಡಿದರು. ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಸಭೆಯು ಮುಕ್ತಯಗೊಂಡಿತು.

Related Posts

Leave a Reply

Your email address will not be published.