ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ಗೂಡುದೀಪ ಸಂಗಮ

ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ನಡೆಸುವ 13 ನೇ ವರ್ಷದ ಗೂಡುದೀಪ ಸಂಗಮ ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆಯು ನ. 11 ರಂದು ಸಂಜೆ 5.30 ಕ್ಕೆ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದರು

ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾಂಪ್ರದಾಯಿಕ ವಿಭಾಗ, ಆಧುನಿಕ ಮತ್ತು ಪ್ರತಿಕೃತಿ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಥಮ , ದ್ವಿತೀಯ, ತೃತೀಯ ನಗದು ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಇದೇ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಚ್ಚಿಲತ್ತಾಯ ನೀಲೇಶ್ವರ ತಂತ್ರಿ ವಹಿಸಲಿದ್ದಾರೆ. ಈ ಬಾರಿಯ ಭಗತ್ ಸಿಂಗ್ ಸಾಧಕ ಪ್ರಶಸ್ತಿಯನ್ನು ಸಮಾಜಸೇವಕ ಹಾಗೂ ಮನಪಾ ಸದಸ್ಯ ಗಣೇಶ್ ಕುಲಾಲ್ ಅವರಿಗೆ ಪ್ರಧಾನ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾನಂ, ವೇಷಂ 2021 ರ ವಿಜೇತರಿಂದ ಸಂಗೀತ ಕಾರ್ಯಕ್ರಮ ಮತ್ತು ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ಜಿತೇಶ್ ಕುಮಾರ್ ಉಳಿಯ ತಂಡದ ಕುಸಲ್ದ ಎಸಲ್ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಗೌರವ ಸಲಹೆಗಾರ ಆನಂದ್ ಮಾಸ್ಟರ್, ಗಣೇಶ್ ಕಾಪಿಕಾಡ್, ಹರೀಶ್ ಅಂಬ್ಲಮೊಗರು, ಮೋಹನ್ ರಾಜ್ ಕೆರೆಬೈಲು ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.