ಮಂಗಳೂರಿನ ಪರಪ್ಪಾದೆಯಲ್ಲಿ ಕರಾವಳಿ ಮ್ಯೂಸಿಕಲ್ ಕ್ಯಾಂಪ್ ಕುಡ್ಲದ ಉದ್ಘಾಟನೆ

ಕರಾವಳಿಯ ಸಂಗೀತ ಪ್ರೀಯರಿಗೆ ಸಿಹಿ ಸುದ್ದಿ, ನಗರದ ಮಾಲೆಮಾರ್-ದೇರೆಬೈಲ್ ಪರಪ್ಪಾದೆಯಲ್ಲಿ ಕರಾವಳಿ ಮ್ಯೂಸಿಕಲ್ ಕ್ಯಾಂಪ್ ಕುಡ್ಲ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕರಾವಳಿ ಮ್ಯೂಸಿಕಲ್ ಕ್ಯಾಂಪ್ ಕುಡ್ಲ ಇದರ ಉದ್ಘಾಟನಾ ಕಾರ್ಯಕ್ರಮವು ನಗರದ ಮಾಲೆಮಾರ್ ದೇರಬೈಲ್ ಪರಪ್ಪಾದೆಯ ಬಾಬು ವರ್ಗೀಸ್ ಎಂಬವರ ಮನೆಯ ಮೇಲ್ಚಾವಣಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಫೇಮಸ್ ಪ್ಲೇಬ್ಯಾಕ್ ಸಿಂಗರ್ ಅಜೆಯ್ ವಾರಿಯರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರಾವಳಿ ಮ್ಯೂಸಿಕಲ್ ಕ್ಯಾಂಪ್ ಕುಡ್ಲಕ್ಕೆ ಶುಭ ಹಾರೈಸಿದರು.

ಡಾ. ಅನಂತ್ ಪ್ರಭು ಮಾತನಾಡಿ, ಎಲ್ಲರ ಜೀವನದಲ್ಲಿ ಸಂಗೀತ ಎನ್ನುವುದು ಬಹಳ ಮುಖ್ಯ. ಎಲ್ಲರೂ ಕೂಡ ಸಂಗೀತವನ್ನು ತುಂಬಾನೆ ಇಷ್ಟಪಡುತ್ತಾರೆ. ಕರಾವಳಿ ಮ್ಯೂಸಿಕಲ್ ಕ್ಯಾಂಪ್ ಕುಡ್ಲ ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು. ಬಳಿಕ ಹಾಡು ಹಾಡಿ ಎಲ್ಲರನ್ನು ರಂಜಿಸಿದರು.

ಇದೇ ವೇಳೆ ಫೇಮಸ್ ಪ್ಲೇಬ್ಯಾಕ್ ಸಿಂಗರ್ ಅಜೆಯ್ ವಾರಿಯರ್ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಶಾಲು ಹೊದಿಸಿ ಸನ್ಮಾನಿಲಾಯಿತು.

ಇದೇ ಸಂದರ್ಭದಲ್ಲಿ ಖ್ಯಾತ ಸಂಗೀತಗಾರ ಅಜೆಯ್ ವಾರಿಯರ್ ಅವರು ಕನ್ನಡದ ವಿವಿಧ ಹಾಡುಗಳನ್ನು ಶುಶ್ರಾವ್ಯವಾಗಿ ಹಾಡಿ ಎಲ್ಲರನ್ನು ಮನರಂಜಿಸಿದರು. ಮಾತ್ರವಲ್ಲದೆ ಭಂಡಾರಿ ಬಿಲ್ಡರ್ರ್‍ಸ್‌ನ ಲಕ್ಷ್ಮೀಶ್ ಭಂಡಾರಿ, ಅವರು ಕೂಡ ತಮ್ಮ ಸುಮಧುರ ಕಂಠದಿಂದ ಹಾಡಿದರು.

ಈ ಸಂದರ್ಭದಲ್ಲಿ ಕೆಕೆ ನೌಶಾದ್, ನರೇಂದ್ರ ನಾಯಕ್, ಬಾಬು ವರ್ಗಿಸ್, ಗೋಪಾಲ್ ಕುಂದರ್, ಅಗರಿ ಉದಯ್ ಕುಮಾರ್ ರೈ, ಸುಶಾಂತ್ ಭಂಡಾರಿ, ಚಿತ್ರರಂಗದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.