ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಮಾನಯಾನ ಅಧ್ಯಯನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ದಿನಾಚರಣೆ

ಸೆಪ್ಟೆಂಬರ್ 24, 2021 ರಂದು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಮಾನಯಾನ ಅಧ್ಯಯನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ದಿನಾಚರಣೆ ನಡೆಯಿತು.

ಎನ್ ಎಸ್ ಎಸ್ ದಿನಾಚರಣೆಯ ಅಂಗವಾಗಿ ಅತಿಥಿ ಭಾಷಣವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಕಾಲೇಜ್ ನ ಸಹ ಪ್ರಾಧ್ಯಾಪಕರೂ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಉನ್ನತ್ ಭಾರತ್ ಅಭಿಯಾನದ ಸಂಯೋಜಕರೂ ಆಗಿರುವ ಡಾ.ಪ್ರದೀಪ್ ಎಂ.ಡಿ “ಸಮಾಜ ಸೇವೆಯು ಒಂದು ಜೀವನ ವಿಧಾನ” ಎಂಬ ವಿಷಯದ ಕುರಿತು ಬಹಳ ಆಕರ್ಷಕವಾದ ಭಾಷಣವನ್ನು ಮಾಡಿದರು.
ಪ್ರೊ.ಪವಿತ್ರ ಕುಮಾರಿ , ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.ಪ್ರೊ.ಜಯಪ್ರಕಾಶ.ಎನ್ ಎಸ್ ಎಸ್ ಸಂಯೋಜಕರು ಸ್ವಾಗತ ಭಾಷಣ ಮಾಡಿದರು.
ಪ್ರೊ. ಕಾವ್ಯಶ್ರೀ, ಕೋರ್ಸ್ ಸಂಯೋಜಕರು, ಮತ್ತು ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ನ ಇತರ ಬೋಧಕ ವರ್ಗದವರು ಹಾಜರಿದ್ದರು.

Related Posts

Leave a Reply

Your email address will not be published.