ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು: ನಗರದ ಟಾಗೂರ್ ಪಾರ್ಕ್‌ನಲ್ಲಿ ಸ್ವಚ್ಛತಾ ಅಭಿಯಾನ
ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯುತ್ತ ಕಾಲೇಜಿನ ಅಟೊನಾಮಸ್ ವಿಭಾಗದ ಎನ್‌ಸಿಸಿ ಏರ್‌ವಿಂಗ್ ಕೆಡೆಟ್‌ಗಳಿಂದ ನಗರದ ಟಾಗೂರ್ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಒಟ್ಟು 59 ಕೆಡೆಟ್‌ಗಳಿಂದ ಸ್ವಚ್ಛಾತಾ ಕಾರ್ಯ ನೆರವೇರಿತು.
ಎನ್‌ಸಿಸಿ ಏರ್‌ವಿಂಗ್‌ನ ಅಫೀಸರ್ ಅಲ್ವಿನ್ ಸ್ಟೀಪನ್ ಮಿಸ್ಕಿತ್ ಅವರು ನೇತೃತ್ವವನ್ನು ವಹಿಸಿದ್ದರು. ಟಾಗೂರ್ ಪಾರ್ಕ್‌ನಲ್ಲಿದ್ದಂತಹ ಪ್ರತಿಮೆಯನನು ವಿದ್ಯಾರ್ಥಿಗಳು ಸ್ಚಚ್ಚಗೊಳಿಸಿದರು. ಇನ್ನು ವಿದ್ಯಾರ್ಥಿಗಳು ಬ್ಯಾನರ್ ಫಲಕಗಳನ್ನು ಹಿಡಿದು ಸ್ವಚ್ಚತೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ಕಮಾಂಡಿಂಗ್ ಅಪೀಸರ್ ಏರ್ ಸ್ಕ್ವಾಡ್ರನ್, ವಿಂಗ್ ಕಮಾಂಡರ್ ಚಂದನ್ ಗಾರ್ಗ್, ವಿದ್ಯಾರ್ಥಿಗಳ ಪ್ರಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.