ಮಂಗಳೂರು ಉವ೯ ಮಾರುಕಟ್ಟೆ ಹಸ್ತಾಂತರ ಕುರಿತು ಸಭೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉವ೯ ಮಾರುಕಟ್ಟೆಯನ್ನು ಮೂಡದಿಂದ ಪಾಲಿಕೆಗೆ ಹಸ್ತಾಂತರಗೊಳಿಸುವ ಕುರಿತು ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಮೂಡ ಕಛೇರಿಯಿಂದ ಈಗಾಗಲೇ ಉವ೯ ಮಾರುಕಟ್ಟೆಯಲ್ಲಿನ ಮೇಲಿನ ಮಹಡಿಗಳಲ್ಲಿರುವ ಕಛೇರಿ ಉಪಯೋಗಿತ ಕೆಲವೊಂದು ಅಂಗಡಿಗಳನ್ನು ಹರಾಜು ರೂಪದಲ್ಲಿ ನೀಡಲು ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಈ ಹಿಂದೆ ಹಳೇ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಗೊಳಿಸಲು ಮತ್ತು ಸರಕಾರದ ನಿಯಮಾವಳಿಯಂತೆ ವ್ಯಾಪಾರಸ್ಥರಿಗೆ ಹರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಿನ ದಿನ ವ್ಯಾಪಾರಸ್ಥರನ್ನು ಕರೆದು ಸಭೆ ನಡೆಸಲು ನಿಣ೯ಯಿಸಲಾಯಿತು. ಸಭೆಯಲ್ಲಿ ಮೂಡ ಅಧ್ಯಕ್ಷರಾದ ರವಿಶಂಕರ್ ಮಿಜಾರು, ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಪಾಲಿಕೆಯ ಸದಸ್ಯರಾದ ಸಂಧ್ಯಾ ಮೋಹನ್ ಆಚಾಯ೯, ನಾಮ ನಿದೇ೯ಶಿತ ಸದಸ್ಯರಾದ ರಾಧಕೃಷ್ಣ, ಪಾಲಿಕೆಯ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.