ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.27ರಿಂದ ಅ.2ರ ವರೆಗೆ ವಾಹನ ದಾಖಲೆ ತಪಾಸಣೆ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನಗಳ ದಾಖಲೆ ತಪಾಸಣೆಗೆ ವಿಶೇಷ ಟ್ರಾಫಿಕ್ ಡ್ರೈವ್ ನ್ನು ಇಂದಿನಿಂದ ಅಕ್ಟೋಬರ್ 2 ರವರೆಗೆ ನಡೆಸಲಾಗುವುದ ಎಂದು ಮಂಗಳೂರುನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಈ ವೇಳೆ ವಾಹನಗಳ ದಾಖಲೆ ತಪಾಸಣೆ ಸೇರಿದಂತೆ ಟ್ರಾಫಿಕ್ ನಿಯಮಗಳ ಬಗ್ಗೆಯೂ ತಪಾಸಣೆ ನಡೆಯಲಿದೆ.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದು, “ಸೆ.27ರಿಂದ ಅ.2ರವರೆಗೆ ಒಂದು ವಾರಗಳ ಕಾಲ ನಾವು ನಿರಂತರವಾಗಿ ಪ್ರತಿದಿನಕ್ಕೆ ಒಂದೊಂದು ಆದ್ಯತೆ ನೀಡಿ ಟ್ರಾಫಿಕ್ ಡ್ರೈವ್ ಮಾಡುತ್ತೇವೆ. ಸೋಮವಾರದಂದು 4 ಚಕ್ರದ ವಾಹನಗಳ ಗ್ಲಾಸ್ ಗಳಲ್ಲಿರುವ ಟೆಂಟ್ ವಿರುದ್ದ ಕಾರ್ಯಾಚರಣೆ ನಡೆಯಲಿದೆ. ಸೆ.28ರಂದು ನಂಬರ್ ಪ್ಲೇಟ್‍ಗಳ ವಿರುದ್ದ ಕಾರ್ಯಾಚರಣೆ ನಡೆಯಲಿದೆ” ಎಂದಿದ್ದಾರೆ.

ಸೆ.29ರಂದು ಹೆಲ್ಮೆಟ್ ವಿರುದ್ದ ಕಾರ್ಯಾಚರಣೆ. ಸೆ.30ರಂದು ಇನ್ಶುರೆನ್ಸ್ ತಪಾಸಣೆ, ಅ.1ರಂದು ಹಳೆ ಕೇಸ್‍ಗಳ ಪರಿಶೀಲನೆ ಹಾಗೂ ಅ.2ರಂದು ಹೊಗೆ ತಪಾಸಣೆಯ ಪರಿಶೀಲನೆ ನಡೆಸಲಾಗುತ್ತದೆ” ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ಮಂಗಳೂರು ನಗರವನ್ನು ಹೆಚ್ಚು ಸುರಕ್ಷಿತವಾಗಿರಿಸಲು, ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಸುರಕ್ಷಿತೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published.