ಮಂಗಳೂರು : ಗುಂಡು ಹಾರಿಸಿ ನಾಯಿ ಹತ್ಯೆ

ಮಂಗಳೂರು ನಗರದ ಶಿವಭಾಗ್‍ನ ಆಭರಣ ಜ್ಯುವೆಲ್ಲರ್ಸ್ ಮಳಿಗೆಯ ಹಿಂಭಾಗದ ರಸ್ತೆಯಲ್ಲಿ ಗುರುವಾರ ರಾತ್ರಿ ವೇಳೆ ಬೀದಿ ನಾಯಿಯೊಂದನ್ನು ಗುಂಡು ಹೊಡೆದು ಸಾಯಿಸಲಾಗಿದೆ. ಸ್ಥಳೀಯ ವ್ಯಕ್ತಿಯೊಬ್ಬ ಈ ಕೃತ್ಯವೆಸಗಿರುವ ಬಗ್ಗೆ ಶಂಕೆ ಇದ್ದು, ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಭಾಗ್ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಬೀದಿ ನಾಯಿಗೆ ವ್ಯಕ್ತಿಯೊಬ್ಬ ಗುಂಡುಹಾರಿಸಿ ಹತ್ಯೆ ಮಾಡಿದ ಈ ಪ್ರಕರಣ ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಘಟನೆ ಪ್ರಾಣಿ ಪ್ರೀಯರನ್ನು ಬೆಚ್ಚಿ ಬೀಳಿಸಿದೆ.

ಈ ಘಟನೆಯ ಬಗ್ಗೆ ಅನಿಮಲ್ ಕೇರ್ ಟ್ರಸ್ಟ್ ನ ಮುಖ್ಯಸ್ಥೆ ಸುಮಾ ರಮೇಶ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆ ತೆರಳಿದ್ದ ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ಮೃತ ನಾಯಿಯನ್ನು ಅಂಬ್ಯೂಲೆನ್ಸ್ ಮೂಲಕ ನಗರದ ಜೈಲು ರಸ್ತೆಯ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿಯ ದೇಹದಲ್ಲಿ ಬುಲೆಟ್ ಲಭಿಸಿರುತ್ತದೆ.

ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಮಾ ರಮೇಶ್ ಅವರು, ಇದೊಂದು ಅಮಾನವೀಯ ಕೃತ್ಯ. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು, ಗುಂಡು ಹಾರಿಸಿದ ವ್ಯಕ್ತಿಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.ಘಟನೆ ನಡೆದ ಬಳಿಕ ಈ ಬೀದಿ ನಾಯಿಯನ್ನು ಮೃತ ದೇಹವನ್ನು ನೋಡಿ ಪಕ್ಕದ ಸಾಕು ನಾಯಿಯೊಂದು ದುಖಿಸುವ ಘಟನೆ ಮನಕಲಕುವಂತೆ ಮಾಡಿತ್ತು.

Related Posts

Leave a Reply

Your email address will not be published.