ಮಂಗಳೂರು ಸ್ವಚ್ಛ ನಗರ ಎಂಬ ಹೆಸರಿಗೆ ಚ್ಯುತಿ ಬಂದಿದೆ : ಜೆ.ಆರ್. ಲೋಬೋ

ಮಂಗಳೂರು ನಗರ ಸ್ವಚ್ಛ ನಗರ ಎಂಬುದಕ್ಕೆ ಹಲವು ಬಾರಿ ಪ್ರಶಸ್ತಿ ಪಡೆದಿದೆ. ಆದರೆ ಇತ್ತಿಚೀನ ದಿನಗಳಲ್ಲಿ ಆ ಹೆಸರಿಗೆ ಚ್ಯುತಿ ಬಂದಿದೆ. ಕಸ ವಿಲೇವಾರಿಯ ನಿರ್ವಹಣೆ ನಗರದಲ್ಲಿ ಸಮರ್ಪಕವಾಗಿಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದರು.

ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸುಮಾರು 52 ಕೋಟಿ ರೂ ವೆಚ್ಚದಲ್ಲಿ ಕಸವನ್ನ ವಿಲೇವಾರಿಗೆ ಬಳಸಲು ಮುಂದಾಗಿದೆ. ಪಾಲಿಕೆ 38 ಕೋಟಿ ಕಸ ವಿಲೇವಾರಿ ವಾಹನ ಖರೀದಿಸಿ ವಾಹನ ನಿರ್ವಹಣೆ ಜವಾಬ್ದಾರಿಯನ್ನ ಹೊರ ಗುತ್ತಿಗೆ ನೀಡಲು ಮುಂದಾಗಿದೆ. ಆದರೆ ರಾಮಕೃಷ್ಣ ಮಠ ಕಸದ ವಿಲೇವಾರಿಯನ್ನ ಯಶಸ್ವಿಯಾಗಿ ನಿರ್ವಹಿಸುವೆ ಎಂದು ಸ್ಥಳೀಯ ಸಂಸ್ಥೆ ಮುಂದೆ ಬಂದಿದೆ. ಆದರೆ ರಾಮಕೃಷ್ಣ ಮಠದವರಿಗೆ ನಿರ್ವಹಣೆಯ ಜವಬ್ದಾರಿ ನೀಡಲು ಬಿಜೆಪಿಯವರಿಗೆ ಆಸಕ್ತಿ ತೋರುತ್ತಿಲ್ಲ. ಪಾಲಿಕೆಯಲ್ಲಿ ಸ್ವಾರ್ಥ ಭಾವನೆ ತಾಂಡವಾಡುತ್ತಿದೆ. ಈ ವಿಷಯವನ್ನ ಮುಂದಿನ ದಿನಗಳಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳೂರು ಪಾಲಿಕೆ ಪ್ರತಿ ಪಕ್ಷದ ನಾಯಕ ಎ.ಸಿ.ವಿನಯ್ ರಾಜ್, ಮಾಜಿ ಉಪಮೇಯರ್ ಮಹಮ್ಮದ್ ಅಲಿ, ಪ್ರವೀಣ್ ಚಂದ್ರ ಆಳ್ವ, ಪ್ರಕಾಶ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.