ಮಹಿಳೆಯರಿಂದ ಗಣೇಶ ವಿನ್ಯಾಸ ಇರುವ ಚಿನ್ನದ ಆಭರಣ ಉತ್ಸವ : ಸೆ.3ರಂದು ಸಚಿವ ಡಾ. ಸುಧಾಕರ್ ಚಾಲನೆ
ಬೆಂಗಳೂರು, ಆ 31; ಕೋವಿಡ್ ಸಂಕಷ್ಟದಿಂದ ಜನತೆ ಹೊರ ಬರುತ್ತಿರುವ ಸಂದರ್ಭದಲ್ಲೇ ಈ ಬಾರಿ ಗೌರಿ – ಗಣೇಶ ಹಬ್ಬಕ್ಕಾಗಿ ವಿಶೇಷವಾಗಿ ಯಲಹಂಕದ ಜಕ್ಕೂರಿನ ಮಧುರ ಮಿಲನ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 3 ರಿಂದ 5 ರ ವರೆಗೆ ಮಹಿಳೆಯರಿಂದಲೇ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.
ಈ ಬಾರಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿದ್ದು, ಹಬ್ಬಕ್ಕೆ ಹೊಳಪು ಮತ್ತು ಮೆರಗು ನೀಡಲು ಮಹಿಳೆಯರಿಂದಲೇ ವಿಶೇಷ ಆಭರಣ ಮೇಳ ಆಯೋಜಿಸಲಾಗುತ್ತಿದೆ.
“ಥ್ರೆಡ್ಸ್ ಆಪ್ ಗೋಲ್ಡ್ – ಬೆಂಗಳೂರು ಜುವೆಲ್ಲರಿ ಶೋ” ಹೆಸರಿನಲ್ಲಿ ನಡೆಯುತ್ತಿರುವ ವಿಶೇಷ ಚಿನ್ನದ ಉತ್ಸವಕ್ಕೆ ಸೆಪೆಂಬರ್ 3 ರಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಚಾಲನೆ ನೀಡಲಿದ್ದಾರೆ. ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ. ಬೇಲೂರು ರಾಘವೇಂದ್ರ ಶೆಟ್ಟಿ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ರಾಷ್ಟ್ರೀಯ ಅಧ್ಯಕ್ಷೆ ರಾಧ ಕೊಲ್ಲಿ, ಕಾಂತಿ ಸ್ವೀಟ್ಸ್ ನ ವ್ಯವಹಾರಿಕ ಪಾಲುದಾರರಾದ ಶಿಖ ಶರ್ಮಾ, ಶ್ರೀಮತಿ ಇಂಡಿಯಾ ಮತ್ತು ರೂಪದರ್ಶಿ ಶುಭಾ ಶ್ರಿರಾಮ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಹಿಳಾ ಉದ್ಯಮಿಗಳಿಂದ ಅತಿದೊಡ್ಡ ಆಭರಣಕಾರರನ್ನು ಒಂದೇ ಸೂರಿಗೆ ತರುವ ಉದ್ದೇಶದಿಂದ ವಿಶಿಷ್ಠ, ವೈವಿಧ್ಯಮಯ ಗಣೇಶ ಉತ್ಸವದ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಆಭರಣ ತಯಾರಕರು ತಮ್ಮ ವಿಶಿಷ್ಠ ಶೈಲಿಯ ಕೈಚಳಕದಿಂದ ತಾಯಾರಾದ ಪ್ರಾಚೀನ ಕಾಲದ ಆಭರಣಗಳು 2021ರ ಆಭರಣ ಮೇಳದಲ್ಲಿ ಫೈಡಿ ಆಭರಣಗಳ ಪ್ರದರ್ಶನ ಆಯೋಜಿಸಲಾಗಿದೆ.
ಬೆಂಗಳೂರು ಉತ್ತರ ಭಾಗದ ಆಭರಣ ಪ್ರಿಯರಿಗೆ ಈ ಮೇಳ ಅತ್ಯಂತ ವಿಶಿಷ್ಟವಾಗಿದೆ. 3 ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 7 ಗಂಟೆ ವರಗೆ ಆಭರಣ ಪ್ರದರ್ಶನ ನಡೆಯುತ್ತದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ವೈವಿದ್ಯಮಯ ವಿನ್ಯಾಸದ, ಆಕರ್ಷಣೀಯ ಬ್ರ್ಯಾಂಡ್ ಆಭರಣಗಳನ್ನು ಒಂದೇ ವೇದಿಕೆಗೆ ತರಲಾಗುತ್ತಿದೆ. ನಿಮಗೆ ಒಪ್ಪುವ, ಕೈಗೆಟುಕುವ, ಸೊಗಸಾದ ಮತ್ತು ಮಾನ್ಯತೆ ಪಡೆದ ಆಧುನಿಕ, ಪಾರಂಪರಿಕ ದೇವಾಲಯಗಳಲ್ಲಿನ ನುರಿತ ವಿನ್ಯಾಸದ ಚಿನ್ನ, ವಜ್ರದ ಆಭರಣಗಳನ್ನು ಆರಿಸಿಕೊಳ್ಳಲು ಈ ಮೇಳ ಅತ್ಯಂತ ವಿಶೇಷವಾಗಿದೆ. ಆಭರಣ ಮೇಳದಲ್ಲಿ ಪ್ರತಿಯೊಂದು ಗಂಟೆಗೆ ಆಕರ್ಷಕ ಬಹುಮಾನ ಗೆಲ್ಲಲು ಸದಾವಕಾಶವಾಗಿದೆ. ಲಕ್ಕಿ ಡ್ರಾ ನಲ್ಲಿ ವಿಜೇತರಾದವರಿಗೆ ಬಹುಮಾನ ದೊರೆಯಲಿದೆ.
ನವರತನ್, ಶ್ರೀ ಕೃಷ್ಣ, ಶ್ರೀ ಗಣೇಶ್, ಗಜರಾಜ್, ಕ್ರಿಯೇಷನ್ ಜುವೆಲರ್ಸ್, ಎಂ.ಪಿ. ಸ್ವರ್ಣಮಹಲ್, ಒ ರುಹ್, ರೂಪಂ ಸಿಲ್ವರ್, ಖೇರಾ ಜುವಲ್ಲರಿ, ವಿ.ಎಸ್. ವಿತ್ರಾಗ್ ಸಿಲ್ವರ್ , ರುಹು ಸಿಲ್ವರ್, ಮತ್ತಿತರ ಆಭರಣ ಸಂಸ್ಥೆಗಳು ತಮ್ಮ ಅಪರೂಪದ, ವೈಶಿಷ್ಟ್ಯಪೂರ್ಣ ವಡವೆಗಳನ್ನು ಪ್ರದರ್ಶಿಸಲಿದ್ದಾರೆ.