ಮಾಡೆಲಿಂಗ್: ಆಕಾಶ್ ಪ್ರಭು ’ಮಿಸ್ಟರ್ ಸುಪ್ರಾನೇಶನಲ್ ಇಂಡಿಯಾ’ ಅಂತಿಮ ಸುತ್ತಿಗೆ ಆಯ್ಕೆ
ಮಂಗಳೂರು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಆಕಾಶ್ ಪ್ರಭು ಅವರು ಈ ವರ್ಷ ಮಿಸ್ಟರ್ ಸುಪ್ರಾನೇಶನಲ್ ಇಂಡಿಯಾ 2021 ರ ಫೈನಲಿಸ್ಟ್ (ಟಾಪ್ 10) ಆಗಿ ಅರ್ಹತೆ ಪಡೆದಿದ್ದು, ಪೋಲೆಂಡ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಅಕಾಶ್ ಪ್ರಭು ಅವರು, ಮಿಸ್ಟರ್ ಇಂಡಿಯಾ 2017 ರ ಬೆಂಗಳೂರು ಫೈನಲಿಸ್ಟ್ ಆಗಿದ್ದರು. ಈ ವರ್ಷ ಅವರು ಮಿಸ್ಟರ್ ಸುಪ್ರಾನೇಶನಲ್ ಇಂಡಿಯಾ 2021 ರ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.
25ರ ಹರೆಯದ ಆಕಾಶ್ ಪ್ರಭು, ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಮೂಲತಃ ಮಂಗಳೂರಿನವರಾಗಿದ್ದು, ಇದೀಗ ಮೈಸೂರಿನಲ್ಲಿ ವಾಸವಾಗಿದ್ದಾರೆ. ಫ್ಯಾಷನ್ ಉದಯೋನ್ಮುಖ ತಾರೆಯಾಗಿ ಮಿಂಚುತ್ತಿದ್ದಾರೆ.
ಎಂಜಿನಿಯರಿಂಗ್ ಕಾಲೇಜಿನಿಂದ ಅತ್ಯುನ್ನತ ಶ್ರೇಣಿಯಲ್ಲಿ ಹೊರಬಂದಿರುವ ಇವರು ಮಾಡೆಲಿಂಗ್ ಮತ್ತು ನಟನೆಯ ಹೆಚ್ಚಿನ ಒಲವನ್ನು ಹೊಂದಿದ್ದಾರೆ.
ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡುವ ಮೂಲಕ ನಿಮ್ಮ ಬೆಂಬಲವನ್ನು ಸೂಚಿಸುವಂತೆ ಕೋರಲಾಗಿದೆ.
https://www.instagram.com/akash_d_prabhu