ಮಾಣಿಬೆಟ್ಟು ಶ್ರೀ ಕೋರ್ದಬ್ಬು ಪರಿವಾರ ದೈವಸ್ಥಾನ:ಉತ್ಖಲನ ಸಂದರ್ಭ ಪ್ರಾಚೀನ ಕಾಲದ ದೈವದ ಪರಿಕರಗಳು ಪತ್ತೆ

ಕೈಕಂಬ: ಗುರುಪುರ ಮಾಣಿಬೆಟ್ಟು ಶ್ರೀ ಕೊರ್‍ದಬ್ಬು ಪರಿವಾರ ದೈವಸ್ಥಾನಕ್ಕೆ ಹತ್ತಿರದಲ್ಲಿದ್ದ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖಲನ ಮಾಡಿದಾಗ ಸುಮಾರು 300 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ.


ಈ ಜಾಗದಲ್ಲಿ ದೋಷವಿದೆ ಮತ್ತು ಹಳೆಯ ದೈವಸ್ಥಾನವಿದ್ದ ಜಾಗದಲ್ಲಿರಬಹುದಾದ ದೈವದ ಸೊತ್ತುಗಳ ಪತ್ತೆ ಹಚ್ಚಿ, ವಿಸರ್ಜಿಸಿದಾಗ ದೋಷ ನಿವಾರಣೆಯಾಗುತ್ತದೆ ಎಂದು ಇತ್ತೀಚೆಗೆ ದೈವಸ್ಥಾನದಲ್ಲಿ ಇಡಲಾಗಿದ್ದ ತಾಂಬೂಲ ಪ್ರಶ್ನೆಯ ವೇಳೆ ದ್ವೈವಜ್ಞರಾದ ಶಶಿಕುಮಾರ್ ಪಂಡಿತ್ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ತಂತ್ರಿಗಳಾದ ಶ್ರೀ ಕೆ ವಿನಾಯಕ ಕಾರಂತರವರ ನೇತೃತ್ವದಲ್ಲಿ ನಡೆದ ಉತ್ಖಲನ ಸಂದರ್ಭದಲ್ಲಿ ಈ ಪರಿಕರಗಳು ಪತ್ತೆಯಾದವು.

ಉತ್ಖನನದ ವೇಳೆ ಸುಮಾರು 300 ವರ್ಷಗಳಷ್ಟು ಹಳೆಯದಾದ ಕೊರ್‍ದಬ್ಬು ಅಥವಾ ಪಂಜುರ್ಲಿ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ(ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.
ಪತ್ತೆಯಾಗಿರುವ ಸೊತ್ತುಗಳು ಸುಮಾರು 300 ವರ್ಷ ಪ್ರಾಚೀನದ್ದಾಗಿರಬಹುದು. ಸದ್ಯ ಇವುಗಳನ್ನು ದೈವಸ್ಥಾನದಲ್ಲಿಡಲಾಗಿದೆ. ಇಲ್ಲಿನ ಶ್ರೀ ಕೊರ್‍ದಬ್ಬು ಕಾರಣಿಕದ ದೈವ ಎಂಬುದಕ್ಕೆ ಈಗ ಸಿಕ್ಕಿರುವ ಪುರಾತನ ಸೊತ್ತುಗಳು ಸಾಕ್ಷವಾಗಿವೆ.

Related Posts

Leave a Reply

Your email address will not be published.