ಮಾನವ ಸಂಬಂಧಗಳನ್ನುಗೌರವಿಸಲು ಪ್ರೇರೆಪಿಸುವ ಮೊಂತಿ ಹಬ್ಬ:ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಸಂದೇಶ

ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರಿಂದ ಮೊಂತಿ ಹಬ್ಬದ ಸಂದೇಶವನ್ನು ಸಾರಿದರು.  ಪ್ರಿಯರೇ ನಿಮಗೆಲ್ಲರಿಗೂ ಮಾತೆ ಮರಿಯಮ್ಮನವರ ಜನುಮದಿನದ ಶುಭಾಶಯಗಳು. ಸಪ್ಟೆಂಬರ್ 08 ರಂದುಆಚರಿಸುವ ಈ ಹಬ್ಬವು ಕರ್ನಾಟಕಕರಾವಳಿಯಕ್ರೈಸ್ತರಿಗೆ ಪ್ರತ್ಯೇಕವಾಗಿ ಕೊಂಕಣಿ ಭಾಷಿಗರಿಗೆ ಅತಿ ಪ್ರೀತಿಯದ್ದಾಗಿದೆ. ನಾವು ಈ ಹಬ್ಬವನ್ನು ‘ಮೊಂತಿ ಫೆಸ್ತ್’ ಅಂತ ಕರೆಯುತ್ತೇವೆ. ಕೊಂಕಣಿ ಸಂಸ್ಕೃತಿಯುಇದರಲ್ಲಿ ಅಡಕವಾಗಿದೆ. ಈ ಹಬ್ಬದ ವಿಶೇಷತೆ  ಹೊಸತನದಿಂದಕೂಡಿರುವುದಾಗಿದೆ. ಕುಟುಂಬದ ಹಬ್ಬಇದಾಗಿದ್ದು, ಹೆಣ್ಣುಮಗುವಿಗೆ ವಿಶೇಷ ಗೌರವವನ್ನು ಕೊಡಲು ಪ್ರೇರೇಪಿಸುವಂತಹದ್ದಾಗಿದೆ. ಇದರ ಜೊತೆಗೆ ಹೊಸ ತೆನೆಯನ್ನು ತಂದು ಆಶೀರ್ವದಿಸಿ ವಿವಿಧ ಬಗೆಯ ತರಕಾರಿಯನ್ನುಆಸ್ವಾದಿಸಿ ಸಂತೋಷಪಡುತ್ತೇವೆ. ಚಿಕ್ಕ ಮಕ್ಕಳ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಹಬ್ಬಇದಾಗಿದೆ. ಕಾರಣ ಈ ಹಬ್ಬದಸಿದ್ಧತೆಯ ದಿನಗಳಲ್ಲಿ ಮಕ್ಕಳು ತಾವೇ ತೋಟ ಹಿತ್ತಲು ಸುತ್ತಿ ಹೂವುಗಳನ್ನುಆರಿಸಿತಂದುಕಂದ ಮರಿಯಳಿಗೆಆರ್ಪಿಸುತ್ತಾರೆ.

ನಮಗೊಂದು ಹೆಣ್ಣು ಮಗುಜನಿಸಿದೆ. ಮುಂದೆ ದೇವಪುತ್ರ ನನ್ನೇಧರೆಗೆ ತರಲು ತಂದೆಯಾದ ದೇವರು ಮರಿಯಳನ್ನು ಆರಿಸಿ, ಅವಳ ಮುಖಾಂತರ ಲೋಕರಕ್ಷಕನನ್ನು ನಮಗೆಕೊಡುತ್ತಾರೆ. ಈ ಹೆಣ್ಣು ಮಗು ಇದೇ ಮಾನವ ಕುಲದತಾಯಿ ಎಂದು ನಾವು ಕ್ರೈಸ್ತರು ನಂಬುವಂತೆ ಮಾಡುವ ಸಂದೇಶ ಈ ಹಬ್ಬ ನಮಗೆ ನೀಡುತ್ತದೆ. ಏಕೆಂದರೆ ವಿಶ್ವಾಸಿಗಳಲ್ಲಿ ಅತೀ ಶ್ರೇಷ್ಠಳು ಈಕೆ.

ಪ್ರಕ್ರತಿಯ ರಕ್ಷಣೆ, ಹೆಣ್ಣು ಮಗುವಿಗೆ ಗೌರವ, ಕುಟುಂಬದ ಏಕತೆ, ಭೂಮಿಯ ಫಲವತ್ತತೆ ಎಲ್ಲವನ್ನು ಸಾರುವ ಮರಿಯ ಜಯಂತಿಯು ನಮಗೆಲ್ಲರಿಗೂ ಸಂತೋಷದ ಕಾರಣವಾಗಲಿ ಎಂದು ಆಶಿಸುತ್ತೇನೆ.ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಮೇಲೆ ನಡೆಯುವದೌರ್ಜನ್ಯ, ಆತ್ಯಾಚಾರ, ಕೊಲೆ, ಮಾನಾವ ಸಾಗಾಟ ವ್ಯವಹಾರ ಹಾಗೂ ಹೆಣ್ಣನ್ನು ಭೋಗದ ವಸ್ತುವಿನಂತೆಕಾಣುವ ಮನುಜರಿಗೆ ನಾವು ಆಚರಿಸುವ ಹಬ್ಬಆವರ ಕಣ್ಣು ತೆರೆದು ಹೆಣ್ಣಿನ ಸ್ಥಾನ ಮಾನ ಆರಿತು ಆವರನ್ನು ಗೌರವಿಸುವ ಹಾಗೆ ಪ್ರೆರಣೆ ನೀಡಲಿ. ಆಗ ನಾವು ಆಚರಿಸುವ ಹಬ್ಬಕ್ಕೊಂದು ಸಾರ್ಥಕತೆ ಬರುವುದು. ಇಂಥಹ ಸಾರ್ಥಕ ಜೀವನ ನಮ್ಮದಾಗಲಿ ಎಂದು ಆಶಿಸುತ್ತೇನೆ. ಈ ಹಬ್ಬವು ನಮ್ಮಕುಟುಂಬ ಸಂಬಂಧಗಳನ್ನು ಬಲಿಷ್ಠಗೊಳಿಸಲು, ಒಗ್ಗಟ್ಟಿನಿಂದ, ಆನ್ಯೋನ್ಯತೆಯಿಂದ ಬಾಳಲು, ಸಂತೊಷದ ಕೌಟುಂಬಿಕ ಜೀವನ ನಡೆಸಲು ಮಾತೆ ಮರಿಯಳು ನಮಗಾಗಿ ಪ್ರಾರ್ಥಿಸಲಿ ಎಂದು ಬೇಡುವ. ನಾಡಿನ ಸಮಸ್ತಜನರಿಗೆ ಮೋತಿ ಹಬ್ಬದ ಶುಭಾಶಯಗಳು. ದೆವರು ನಮ್ಮೆಲ್ಲರನ್ನು ಹರಸಲಿ  ಎಂದು ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಸಂದೇಶ ಸಾರಿದರು.

 

Related Posts

Leave a Reply

Your email address will not be published.