ಮಿಶ್ರಬೆಳೆಗಳಿಗೆ ಆದ್ಯತೆ ನೀಡಿ-ಶಾಸಕ ಸಂಜೀವ ಮಠಂದೂರು
ಪುತ್ತೂರು: ಕೊರೋನಾ ಸಂಕಷ್ಟದಲ್ಲಿ ವ್ಯಾಪಾರ ಕೈಗಾರಿಕೆಗಳು ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಕೃಷಿಕೆ ಒಲವು ತೋರಿಸಿದ್ದಾರೆ. ಅವರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡಿ ಎಂದು ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ತಾ.ಪಂ ಕಿರು ಸಭಾಂಗಣದಲ್ಲಿ ನಡೆದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಸೂಚನೆ ನೀಡಿದರು.ಅಡಿಕೆ ಬಿಟ್ಟು ಮಿಶ್ರ ಬೆಳೆಗೆ ಆದ್ಯತೆ ನೀಡಿ, ಹೊಸ ತಳಿಗಳಿ ಬೆಳೆಸಲು ಪ್ರೊತ್ಸಾಹ ನೀಡಿ. ಈ ಕೋವಿಡ್ ಸಂದರ್ಭ ಸೂಕ್ತ ಅವಕಾಶ ಉಪಯೋಗಿಸಿ ಕೊಳ್ಳಿ ಎಂದು ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ತಿಳಿಸಿದರು.
ಮುಂಗಾರು ಮಳೆಗೆ ಬಿತ್ತನೆ ಬೀಜ, ಕೃಷಿಗೆ ಆದ್ಯತೆ ಬೆಳವಣಿಕೆ ಕುರಿತು ಶಾಸಕ ಸಂಜೀವ ಮಠಂದೂರು ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕೃಷಿ ನಿರ್ದೇಶಕ ಶಿವಶಂಕರ್ ಸೇರಿದಂತೆ ಇಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು