ಮೀನಿನ ವ್ಯಾಪಾರಿಯ ಅಪಹರಣ: ವಿಟ್ಲ ಪೊಲೀಸ್ ಠಾಣೆಗೆ ದೂರು
ವಿಟ್ಲ: ಕೊಳ್ನಾಡು ಗ್ರಾಮದ ಕೆ.ಪಿ ಬೈಲು ನಾರ್ಶ ಎಂಬಲ್ಲಿ ಮೀನಿನ ವ್ಯಾಪಾರಿಯೊಬ್ಬರನ್ನು ಅಪರಿಚಿತರ ತಂಡವೊಂದು ಅಪಹರಣ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊಳ್ನಾಡು ಗ್ರಾಮದ ಕೆ ಪಿ ಬೈಲು ನಾರ್ಶ ನಿವಾಸಿ ಮಹಮ್ಮದ್ ಅನ್ಸಾರ್(34) ಅಪಹರಣಗೊಳಗಾದ ವ್ಯಕ್ತಿಯಾಗಿದ್ದು, ಈ ಬಗ್ಗೆ ಅವರ ಪತ್ನಿ ಅಪ್ಸ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಹಮ್ಮದ್ ಅನ್ಸಾರ್ (31) ಎಂಬವರು ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಬೇರೆ ವ್ಯವಹಾರ ಮಾಡುತ್ತೇನೆಂದು 2 ತಿಂಗಳ ಹಿಂದೆ ಕೇರಳಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಕೆಲ ದಿನ ಒಂದು ಬಾರಿ ಪತ್ನಿಗೆ ಕರೆ ಮಾಡುತ್ತಿದ್ದರು. ಬಳಿಕ ಮರಳಿ ಮನೆಗೆ ಮರಳಿದ್ದರು. ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಮೊಹಮ್ಮದ್ ಅನ್ಸಾರ್ ಅವರನ್ನು ಯಾರೋ ಅಪರಿಚಿತರು ಬಲವಂತವಾಗಿ ಕರೆದುಕೊಂಡು ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.