ಮೀನುಗಾರಿಕೆಗೂ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣಕ್ಕೆ ಮನವಿ
ಕುಳಾಯಿ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಜೆಟ್ಟಿ ಕಾಮಗಾರಿಗೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯರವರು ಸ್ಥಳೀಯ ಶಾಸಕರೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು
ಕುಳಾಯಿ:- ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಮೀನುಗರಿಕಾ ಜೆಟ್ಟಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ನಾಡದೋಣಿ ಮೀನುಗಾರರಿಗೆ ಅನುಕೂಲಕರವಾಗಿಲ್ಲ. ತಕ್ಷಣ ಬ್ರೇಕ್ ವಾಟರ್ ವಿಸ್ತರಣೆ ಸಹಿತ ಸರ್ವ ಋತು ಬಂದರು ಮಾಡಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದ ಹಿನ್ನಲೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಮನವಿ ಮೇರೆಗೆ
ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಬುಧವಾರ ಕಾಮಗಾರಿ ಸ್ಥಳಕ್ಕೆ ಭೇಟಿ ಮೀನುಗಾರರ ಸಭೆಯಲ್ಲಿ ಪಾಲ್ಗೊಂಡು ಅಹವಾಲು ಆಲಿಸಿದರು.
ನಾಡದೋಣಿ ಮೀನುಗಾರಿಕೆಗೂ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣವಾಗಬೇಕು ಎಂದು ಮೀನುಗಾರರು ಮನವಿ ಮಾಡಿದರು. ಐಐಟಿ ಚೆನ್ನೈ ನಿಂದ ವರದಿ ತಯಾರಿಸಿದ ಬಳಿಕ ಕಾಮಗಾರಿ ಮುಂದುವರೆಸಲು ತೀರ್ಮಾನಿಸಲಾಯಿತು. ಶಾಸಕರು, ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಾಮಗಾರಿಯ ಕುರಿತಂತೆ ಸಚಿವರಿಗೆ ಮಾಹಿತಿ ನೀಡಿದರು. ಮೂಲ ಮೀನುಗಾರರ ಸಂಘ, ನಾಡದೋಣಿ, ಎನ್.ಎಂ.ಪಿ.ಎ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.