ಮೂಡುಬಿದರೆಯಲ್ಲಿ ಎರಡು ತಿಂಗಳ ಬಳಿಕ ಬಸ್ ಸಂಚಾರ

ಎರಡು ತಿಂಗಳ ಲಾಕ್ ಡೌನ್ ಮುಗಿದು ಮೂಡುಬಿದಿರೆಯಲ್ಲಿ ಸೋಮವಾರದಂದು ಶೇ ೫೦ರಷ್ಟು ಖಾಸಗಿ ಬಸ್ಸುಗಳು ರಸ್ತೆಗಿಳಿದು ಓಡಾಟ ಆರಂಭಿಸಿದವು.ಖಾಸಗಿ ಬಸ್ಸುಗಳು ರಸ್ತೆಗಿಳಿದುದರಿಂದ ಜನರು ತಾವು ಹೋಗಬೇಕಾದ ಸ್ಥಳಗಳಿಗೆ ಬೆಳಗಿನಿಂದಲೇ ಬಸ್ಸುಗಳನ್ನು ಆಶ್ರಯಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ ಬಸ್ಸು ತಂಗುದಾಣದ ಆವರಣದಲ್ಲಿ ಇತರ ವಾಹನಗಳು ಬಂದು ನಿಲ್ಲುತ್ತಿದ್ದವು. ಅದರಂತೆ ಸೋಮವಾರವು ಕೂಡಾ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಬಸ್ಸು ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿ ಹೋಗಿದ್ದರಿಂದ ಬಸ್ಸುಗಳಿಗೆ ಪಾರ್ಕ್ ಮಾಡಲು ಕಷ್ಟ ಸಾಧ್ಯವಾಗುತ್ತಿರುವುದು ಕಂಡು ಬಂತು.

 

Related Posts

Leave a Reply

Your email address will not be published.