ಮೂಡುಬಿದರೆಯಲ್ಲಿ ಸಿಡಿಲಬ್ಬರಕ್ಕೆ ಇಬ್ಬರು ಮೃತ್ಯು : ಸಾಂತ್ವಾನ ಹೇಳಿದ ಬಿಜೆಪಿ ರಾಜ್ಯಾದ್ಯಕ್ಷರು
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಕಂಚಿಬೈಲು ಅರ್ಬಿ ಫಾಲ್ಸ್ ಬಳಿಯಲ್ಲಿ ಶೆಡ್ಡ್ ಒಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ನಿನ್ನೆ ನಡೆದಿದ್ದು,
ಈ ದುರ್ಘಟನೆಯಲ್ಲಿ ಸಿಡಿಲಿಗೆ ಬಲಿಯಾದಪುತ್ತಿಗೆಯ ನಿವಾಸಿಗಳಾದ ಯಶವಂತ (22) ಮತ್ತು ಮಣಿ ಪ್ರಸಾದ್ (22) ಮನೆಗೆ ಬಿಜೆಪಿ ರಾಜ್ಯಾದ್ಯಕ್ಷರು ಹಾಗೂ ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಮಾನ್ಯ ಶಾಸಕರಾದ ಶ್ರೀ ಉಮನಾಥ್ ಕೋಟ್ಯಾನ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.