ಮೂಡುಬಿದಿರೆ: ರಂಗಸ್ಥಳದಲ್ಲಿ ಕುಸಿದುಬಿದ್ದ ಕಲಾವಿದ
ಮೂಡುಬಿದಿರೆಯ ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಬಳಿಕ ಚೇತರಿಸಿಕೊಂಡು ಬಳಿಕ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.
ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಅಮ್ಮುಂಜೆ ಅವರು ಪಾತ್ರಧಾರಿಯಾಗಿದ್ದರು. ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದು, 15 ನಿಮಿಷಗಳ ಕಾಲ ಯಕ್ಷಗಾನವನ್ನು ನಿಲ್ಲಿಸಲಾಯಿತು. ಅಮ್ಮುಂಜೆ ಅವರು ಚೇತರಿಸಿಕೊಂಡ ಬಳಿಕ ಮತ್ತೆ ಅವರು ತಮ್ಮ ಪಾತ್ರವನ್ನು ಮುಂದುವರಿಸಿದರು.