ಮೂಡುಬಿದಿರೆ ಸಂಸ್ಕೃತ ಗುರು ಅನಂತ ಜೋಷಿ ನಿಧನ

ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಹಿತ ಹಲವು ಧಾರ್ಮಿಕ ಮುಖಂಡರ ಸಂಸ್ಕೃತ ಗುರು, ಆಧ್ಯಾತ್ಮ ಅವದೂತ ಮೂಲತಃ ಬೆಳಗಾವಿ ಖಾನಪುರದ ಅನಂತ ಜೋಷಿ(81) ಅವರು ಪಾರ್ಶ್ವಕೀರ್ತಿ ಅತಿಥಿಗೃಹದಲ್ಲಿ  ನಿಧನರಾದರು.
ಅವರು ಕಳೆದ ಕೆಲವು ವರ್ಷಗಳಿಂದ ರಮಾರಾಣಿ ಶೋದ ಸಂಸ್ಥಾನದಲ್ಲಿ ಸಂಸ್ಕೃತ ಪಾಠ ಬೋಧಿಸುತ್ತದ್ದರು. ಬನಾರಸ್ ಬೈದನಿಘಾಟ್ ನಲ್ಲಿ ಸುಮಾರು 30 ವರ್ಷ ಮೊದಲು ಮೂಡುಬಿದಿರೆ ಭಟ್ಟಾರಕಶ್ರೀ ಅವರಿಗೆ ಜ್ಯೋತಿಷ್ಯ ಪಾಠ ಕಲಿಸಿಕೊಟ್ಟಿದ್ದರು. ಕನಕ ಗಿರಿ, ಅರಹಂತ ಗಿರಿ ಕಾಶಿ ಚಂದ್ರಶೇಖರ್ ಸ್ವಾಮೀಜಿ ಒಡನಾಟ ಹೊಂದಿದ್ದರು.ಕಳೆದ 5 ವರ್ಷ ಗಳಿಂದ ವಯೋ ಸಹಜ ಕಾರಣಗಳಿಂದ ಕಣ್ಣಿನ ದೃಷ್ಟಿ ದೋಷ ದಿಂದ ಹೆಚ್ಚಿನ ಸಮಯ ಧ್ಯಾನ ಮೌನ ದಿಂದ ಕಳೆಯುತ್ತಿದ್ದರು.

Related Posts

Leave a Reply

Your email address will not be published.