ಮೂರನೇ ಅಲೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪ

ಮಂಗಳೂರು: ದೇಶದಾದ್ಯಂತ ಇಲ್ಲಿಯ ತನಕ 2 ಲಸಿಕೆ ಪಡೆದವರು ಕೇವಲ 7.78 ಕೋಟಿ ಜನ ಹಾಗೂ ಮೊದಲ ಲಸಿಕೆ ಪಡೆದವರು 14 ಕೋಟಿ (ಶೇ.10) ಜನರು ಮಾತ್ರ ಇಲ್ಲಿಯ ತನಕ ಕೇವಲ ಶೇ.15 ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದು, ಈಗಾಗಲೇ 3ನೇ ಕೋವಿಡ್ ಅಲೆ ಪ್ರರಂಭವಾಗಿದ್ದು, ಲಸಿಕೆ ಪ್ರಾರಂಭವಾಗಿ 7 ತಿಂಗಳು ಕಳೆದರೂ ಸರ್ಕಾರ 3ನೇ ಅಲೆ ತಡೆಯಲು ಮುಂಜಾಗೃತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‍ಸಿ ಹರೀಶ್ ಕುಮಾರ್ ಆರೋಪಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಇನ್ನೂ 2 ವರ್ಷ ಕಳೆದರೂ ಶೇ.100 ರಷ್ಟು ಕೋವಿಡ್ ಲಸಿಕೆ ನೀಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಮುಂದಿನ 2 ತಿಂಗಳಲ್ಲಿ ಶೇ.75 ರಷ್ಟು ಜನರಿಗೆ ಲಸಿಕೆ ನೀಡುವಂತ ಒತ್ತಾಯಿಸಿದರು. 3ನೇ ಅಲೆಯನ್ನು ತಡೆಯಲು ಲಸಿಕೆ ಮುಖ್ಯ ಕಾರಣವಾಗಿದ್ದು, ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡುವಂತೆ ಆಗ್ರಹಿಸಿದ ಅವರು ಈಗಾಗಲೇ ರಾಜಕೀಯ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಭೆಗಳು, ಮಾರುಕಟ್ಟೆ, ಮದುವೆ ಮೊದಲದ ಕಡೆಗಳಲ್ಲಿ ಜನರು ಸಮಾಜಿಕ ಅಂತರ, ಮಸ್ಕ್ ಧರಿಸಿ ಕೊರೊನಾ ತಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಸದಾಶಿವ ಉಳ್ಳಾಲ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಗಣೇಶ್‍ಪುಜಾರಿ, ಶುಭೋದಯ ಆಳ್ವ, ಸುರೇಶ್ ಕೋಟೆಕಾರ್, ಅಭಿಷೇಕ್ ಉಳ್ಳಾಲ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.