ಮೆಸ್ಕಾಂ ಕಚೇರಿಯ ಎದುರು ರಾತ್ರೋ ರಾತ್ರಿ ಧರಣಿ
ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಕೋಂಕೆ ಎಂಬಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಟ್ಟು 4 ದಿನಗಳಾಗಿದ್ದು ಸ್ಥಳಿಯ ನಿವಾಸಿಗಳು ಕುಡಿಯಲೂ ನೀರಿಲ್ಲದೆ ತೊಂದರೆ ಅನುಭವಿಸಿದ್ದಾರೆ. ಈ ಭಾಗದಲ್ಲಿ ಬಹಳಷ್ಟು ಕೃಷಿಕರೂ ಇದ್ದು ಕೃಷಿಗೆ ನೀರು ಬಿಡಲೂ ಸಾಧ್ಯವಾಗದೆ ತೊಂದರೆ ಅನುಭವಿಸಿದರೂ ಮೆಸ್ಕಾಂ ಇಲಾಖೆಯ ಎ.ಇ.ಇ., ಎಸ್ .ಒ. ಸಹಿತ ಸಿಬ್ಬಂದಿಗಳು ವಿಷಯ ತಿಳಿದರೂ ಸಹಕರಿಸದೆ ಬಹಳಷ್ಟು ತೊಂದರೆ ನೀಡಿದ್ದಾರೆ.
ಕೊನೆಕೊನೆಗೆ ಮೊಬೈಲ್ ಕರೆ ಮಾಡಿದರೂ ಕರೆ ಸ್ವೀಕರಿಸದೆ ನಿರ್ಲಕ್ಷ್ಯರು. ತೋರಿದ್ದಾರೆ. ದಿನಾಂಕ 21ರಂದು ರಾತ್ರಿ ರೈತ ಮುಖಂಡ ಆಲ್ವಿನ್ ಮಿನೇಜಸ್ ಅವರ ನೇತ್ರತ್ವದಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.