ಮೈಸೂರಿನಲ್ಲಿ ವಿದ್ಯಾರ್ಥಿ ಮೇಲೆ ಗ್ಯಾಂಗ್‌ರೇಪ್ ನಡೆದಿರುವ ಶಂಕೆ..!

ಮೈಸೂರು:  ಮೈಸೂರಿನಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು ಸಾಂಸ್ಕೃತಿಕ ನಗರಿ ಜನತೆಯ ನಿದ್ದೆಗಡಿಸಿದೆ. ಇದೀಗ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎನ್ನಲಾಗಿದ್ದು ಜನತೆಯನ್ನು ಆತಂಕಕ್ಕೆ ನೂಕಿದೆ.

ಹಾಡುಹಗಲಲ್ಲೇ ಯುವಕನಿಗೆ ಗುಂಡು ಹಾರಿಸಿ ಜ್ಯುವೆಲಲ್ಲರಿ ಶಾಪ್ ದರೋಡೆ, ಯುವತಿಗೆ ಚಾಕುವಿನಿಂದ ಇರಿತ ಪ್ರಕರಣಗಳು ಮಾಸುವ ಮುನ್ನವೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಮೈಸೂರು ನಿವಾಸಿ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ತನ್ನ ಗೆಳೆಯನೊಂದಿಗೆ ಲಲಿತಾದ್ರಿಪುರ ಬೆಟ್ಟಕ್ಕೆ ತೆರಳಿದ ವೇಳೆ ಆಕೆಯ ಮೇಲೆ ಐದಾರು ಮಂದಿ ಯುವಕರಿದ್ದ ತಂಡವೊಂದು ಗ್ಯಾಂಗ್ ರೇಪ್ ನಡೆಸಿದೆ ಎನ್ನಲಾಗಿದ್ದು, ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಆ ಯುವಕರು ಯಾರು, ವಿದ್ಯಾರ್ಥಿನಿಯ ಗೆಳೆಯನ ಸ್ನೇಹಿತರಾ? ಅಥವಾ ಹೊರಗಿನಿಂದ ಬಂದವರಾ? ಏನಕ್ಕಾಗಿ ಲಲಿತಾದ್ರಿಪುರ ಬೆಟ್ಟಕ್ಕೆ ಬಂದಿದ್ದರು ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಬೇಕಿದೆ.

ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಂತವಾಗಿದ್ದ ನಗರದಲ್ಲೀಗ ಅಪರಾಧಿಕೃತ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು ಸಾರ್ವಜನಿಕರು ಇದೀಗ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ.

Related Posts

Leave a Reply

Your email address will not be published.