ಯೆನೆಪೋಯ ವತಿಯಿಂದ ಪತ್ರಕರ್ತರಿಗೆ ಯೆನ್ ಮೀಡಿಯ ಕಾರ್ಡ್ ವಿತರಣೆ

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ದ.ಕ ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಮತ್ತು ಅವರ ಕುಟುಂಬಸ್ಥರಿಗೆ ಯೆನ್ ಮೀಡಿಯ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಯೆನ್ ಮೀಡಿಯ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ. ಕೊರೊನಾ ಸಂದರ್ಭದಲ್ಲಿ ಪ್ರೆಂಟ್ ಲೈನ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ ಪತ್ರಕರ್ತರಿಗೆ ಸ್ಪೆಷ್ಯಾಲಿಟಿ ಮತ್ತು ಮಲ್ಟಿ ಸ್ಪೆಷ್ಯಾಲಿಟಿ ಆರೋಗ್ಯ ಸೇವೆಯನ್ನ ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದ್ದು.ಕೇವಲ 100 ರೂಪಾಯಿ ಶುಲ್ಕವನ್ನ ಭರಿಸಿ ಕುಟುಂಬದ 5 ಜನ ಸದಸ್ಯರು ಈ ಸೇವೆಯನ್ನ ಪಡೆಯಬಹುದಾಗಿದೆ ಎಂದು ಯೆನೆಪೋಯ ಆಡಳಿತ ಮಂಡಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರು ಡಾ||ಪ್ರಕಾಶ್ ಆರ್.ಎಮ್.ಸಲ್ಡಾನ್ .ವಿಜಾನಂದ.ಅರುಣ್ ನಾಥ್.ಮಹಮ್ಮದ್ ಗುತ್ತಿಗಾರ.ಇನ್ನಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.