ರಾಜ್ಯದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಯಲಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಾರ್ಕಳ: ರಾಜ್ಯದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಸೆ ಬಗೆಹರಿಯಲಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷ ಹೆಕ್ಟೇರ್ ಪ್ರದೇಶವು ಡೀಮ್ಡ್ ಫಾರೆಸ್ಟ್ ಒಳಗೊಂಡಿದ್ದು, ಜಿಲ್ಲೆಯಲ್ಲಿ 34ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ನಲ್ಲಿದೆ. ಅದನ್ನು ಮುಕ್ತ ಮಾಡುವುದು ಸರಕಾರದ ಬದ್ಧತೆಯಾಗಿದೆ. ಕುಮ್ಕಿ ಸಮಸ್ಸೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಮುಂದಿಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಇದರ ಬಗ್ಗೆ ನಿರ್ಲಕ್ಷ್ಯ ತೋರಿತ್ತೆಂದು ಧಾರ್ಮಿಕ ದತ್ತಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.

ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಆಯೋಜಿಸ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಡಜನರಿಗೆ ನಿವೇಶನ-ಮನೆ,ನೀರು,ವಿದ್ಯುತ್, ರಕ್ಷಣೆ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದು ಸರಕಾರದ ಜಬಾವ್ದಾರಿಯಾಗಿದೆ. ಆದರೆ ಡೀಮ್ಡ್‌ಫಾರೆಸ್ಟ್ ನಿಂದಾಗಿ ಅದರ ಸೌಲಭ್ಯ ಒದಗಿಸಲು ಸಾಧ್ಯವಾಗರುವುದನ್ನು ವಿವರಿಸಿದರು.

ಗೋರಕ್ಷಣೆಗೆ ಸರಕಾರ ಬದ್ಧ ಗೋರಕ್ಷಣೆಯ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗುವುದು. ಪ್ರಥಮ ಹಂತದಲ್ಲಿ 30 ಗೋಶಾಲೆಗಳು ನಿರ್ಮಾಣವಾಗಲಿದೆ. ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಳಗಳ ವತಿಯಿಂದಲೂ ರಾಜ್ಯದಲ್ಲಿ ೫೦ ಗೋಶಾಲೆಯನ್ನು ನಡೆಸಲಾಗುವುದು. ಆ ಮೂಲಕ ಬಿಜೆಪಿ ಕಾರ್ಯಕರ್ತರ ಅಭಿಲಾಷೆಯನ್ನು ಸರಕಾರ ಈಡೇರಿಸಿದಂತಾಗುತ್ತದೆ.

ಸಪ್ತಪದಿಗೆ ಮತ್ತೇ ಚಾಲನೆ

ಕರೋನಾದಿಂದ ಸ್ಥಗಿತಗೊಂಡ ಸಾಮೂಹಿಕ ವಿವಾಹ ಸಪ್ತಪದಿಗೆ ಸರಕಾರ ಮತ್ತೇ ಚಾಲನೆ ನೀಡಲಿದೆ. ಪ್ರತಿ ಜೋಡಿಗೆ ಸುಮಾರು ರೂ.೫೫ ಸಾವಿರ ಖರ್ಚು ಭರಿಸಲಿದೆ.

1.5 ಕೋಟಿ ಬೇಡಿಕೆ ಕೇಂದ್ರದ ಮುಂದಿದೆ

ರಾಜ್ಯಕ್ಕೆ 1.5 ಕೋಟಿ ವ್ಯಾಕ್ಸಿನ್ ಲಸಿಕೆ ಬೇಡಿಕೆಯಿದ್ದು, ಅದನ್ನು ಕೇಂದ್ರ ಸರಕಾರದ ಮುಂದಿರಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದ್ದ ಎಲ್ಲ ಕುಟುಂಬಸ್ಥರು ಇದರ ಪ್ರಯೋಜನ ಪಡೆಯಬಹುದೆಂದರು.

ದೇವಳಗಳಲ್ಲಿ ಅನ್ನದಾನ

ದೇವಸ್ಥಾನಗಳು ಈಗಾಗಲೇ ತೆರದುಕೊಂಡಿವೆ. ಶೀಘ್ರವೇ ದೇವಳದ ಸೇವಗೆಳು ಹಾಗೂ ಅನ್ನದಾನ ಸೇವೆ ಆರೆಂಭವಾಗಲಿವೆ. ಪ್ರಸಿದ್ಧ ಶ್ರೀ ಕೇತ್ರಗಳಲ್ಲಿ ನೂಕುನುಗ್ಗಲು ಆಗುವುದರಿಂದ ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗಿದೆ. ಕರೋನಾ ಇದೀಗ ಶೇ.೫ಕ್ಕೀಂತ ಕಡಿಮೆಯಿದ್ದು, ಒಂದುವೇಳೆ ಅದಕ್ಕಿಂತ ಹೆಚ್ಚಾದಲ್ಲಿ ಮತ್ತೇ ಲಾಕ್‌ಡೌನ್ ಅನಿವಾರ್ಯವಾಗಬಹುದೆಂಬ ಮುನ್ಸೂಚನೆ ನೀಡಿದರು.

ಪಕ್ಷದ ಕಚೇರಿಯೇ ಬಿಜೆಪಿ ಕಾರ್ಯಕರ್ತರ ತಳಹದಿ ಆಡಳಿತ್ಮಾಕ ಸುಧಾರಣೆಯನ್ನು ಕಾರ್ಯಕರ್ತರಿಗೆ ತಿಳಿಸಲು ಹಾಗೂ ಪಕ್ಷದ ಸಂಘಟನೆ ಜನಾಭಿಪ್ರಾಯ ಕ್ರೋಡೀಕರಣ ಉದ್ದೇಶ ಇದಾಗಿದೆ. ಪಕ್ಷದ ಕಚೇರಿಯೇ ಬಿಜೆಪಿ ಕಾರ್ಯಕರ್ತರ ತಳಹದಿಯಾಗಿದೆ. ಕಾರ್ಯಕರ್ತರನ್ನು ಸಂಪರ್ಕವು ಪ್ರತಿಕೇತ್ರದಲ್ಲಿ ನಡೆಯಲಿದೆ ಎಂದರು.ಆರ್ ಎಸ್ ಎಸ್ ಮುಖಂಡ ಬೋಳ ಪ್ರಭಾಕರ ಕಾಮತ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ರವೀಂದ್ರ ಕುಮಾರ್, ಸವಿತಾ ಕೋಟ್ಯಾನ್, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಮೊದಲಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.