ರಾಜ್ಯ ಮಟ್ಟದ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಈಜುಪಟುಗಳಿಂದ ಪದಕಗಳ ಬೇಟೆ

ಬೆಂಗಳೂರಿನ ಬಸವನಗುಡಿಯ ಅಕ್ವಾಟಿಕ್ ಸೆಂಟರ್ ನಲ್ಲಿ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಅಕ್ವಾಟಿಕ್ ಚಾಂಪಿಯನ್ ಶಿಪ್ ಸ್ಮಿಮ್ಮಿಂಗ್ ಸ್ಪರ್ಧೆ ನಡೆಯುತ್ತಿದ್ದು ಮಂಗಳೂರಿನ ವಿ ವನ್ ಅಕ್ವಾ ಸೆಂಟರ್‌ನ ಈಜು ಪಟುಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.ಇನ್ನು ಈ ಈಜುಪಟುಗಳು ಬೆಂಗಳೂರಿನ ಡಾಲ್ಪಿನ್ ಅಕ್ವಾಟಿಕ್ ಸೆಂಟರನ್ನು ಪ್ರತಿನಿಧಿಸುತ್ತಿದ್ದಾರೆ.

ಮಂಗಳೂರಿನ ಸೈಂಟ್ ಅಲೋಶಿಯಸ್ ವಿ ವನ್ ಅಕ್ವಾ ಸೆಂಟರ್‌ನ ಈಜುಪಟುಗಳು ರಾಜ್ಯಮಟ್ಟದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಇನ್ನು ಈ ಈಜುಪಟುಗಳು ಬೆಂಗಳೂರಿನ ಡಾಲ್ಪಿನ್ ಅಕ್ವಾಟಿಕ್ ಸೆಂಟರನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಈಜುಪಟುಗಳು ಚಿನ್ನ, ಬೆಳ್ಳಿ, ಕಂಚಿನ ಪದಗಳನ್ನು ಬಾಚಿಕೊಂಡಿದ್ದಾರೆ. ಸೆಪ್ಟಂಬರ್ 23ರಿಂದ ಸೆ.28ರ ವರೆಗೆ ಈಜು ಸ್ಪರ್ಧೆ ನಡೆಯಲಿದೆ.

ಗುಂಪು 3 ರ ಬಾಲಕರ ವಿಭಾಗದಲ್ಲಿ ನೈತಿಕ್ ಎನ್ ಗೆ 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ, 200 ಮೀಟರ್ ವೈಯುಕ್ತಿ ಮಿಡ್ಲೆ ವಿಭಾಗದಲ್ಲಿ ಮತ್ತು 100 ಮೀಟರ್ ಬಟರ್ ಪ್ಲೈ ನಲ್ಲಿ ಎರಡು ಬೆಳ್ಳಿ, 200ಮೀಟರ್ ಪ್ರೀ ಸ್ಟೈಲ್ ನಲ್ಲಿ ಒಂದು ಕಂಚಿನ ಪದಕವನ್ನು ಪಡೆದಿದ್ದಾರೆ.

ಗುಂಪು 4ರ ಬಾಲಕಿಯರ ವಿಭಾಗದಲ್ಲಿ ಅಲಿಸ್ಸಾ ಸ್ವೀಡಲ್ ರೆಗೊ 100 ಮೀಟರ್ ನಲ್ಲಿ ಚಿನ್ನ, 200 ಮೀಟರ್ ಪ್ರೀ ಸ್ಟೈಲ್ ನಲ್ಲಿ ಬೆಳ್ಳಿ, 50 ಪ್ರಿ ಸ್ಟೈಲ್ 50 ಮತ್ತು 100 ಮೀಟರ್ ಬಟರ್ ಪ್ಲೈ ನಲ್ಲಿ ಚಿನ್ನ, 200  ಮೀಟರ್ ವೈಯುಕ್ತಿ ಮಿಡ್ಲೆ ವಿಭಾಗದಲ್ಲಿ ಚಿನ್ನ ಮಾತ್ರವಲ್ಲದೆ ವೈಯಕ್ತಿಕ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿದ್ದಾರೆ.ದಿಶಾ ಶೆಟ್ಟಿ 50  ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಗುಂಪು ಎರಡರ ಬಾಲಕರ ವಿಭಾಗದಲ್ಲಿ ಅಲಿಸ್ಟರ್ ಸ್ಯಾಮ್ಯುಯೆಲ್ ರೇಗೋ ಗೆ 1500 ಮೀಟರ್ ಪ್ರಿ ಸ್ಟೈಲ್ ಮತ್ತು 400 ಮೀಟರ್ ಪ್ರಿ ಸ್ಟೈಲ್ ನಲ್ಲಿ ಎರಡು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಸ್ಟೀವ್ ಜೆಪ್ ಲೋಬೊ 200ಮೀಟರ್ ಬಟರ್ ಪ್ಲೈ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ದಿಗಂತ್ ವಿ.ಎಸ್ ಗೆ 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ 1 ಕಂಚಿನ ಪದಕ ಪಡೆದಿದ್ದಾರೆ.

ಗುಂಪು ಎರಡರ ಬಾಲಕಿಯರ ವಿಭಾಗದಲ್ಲಿ ರಿಯಾನಾ ಧೃತಿ ಫೆರ್ನಾಂಡಿಸ್ ಗೆ 100 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಇನ್ನು ಈಜುಪಟುಗಳಾದ ನೈತಿಕ್, ಅಲಿಸಾ, ದ್ವಿಷಾ, ಅಲಿಸ್ಟರ್, ಸ್ಟೀವ್, ಧೃತಿ ಈ 6ಈಜುಗಾರರು ಬೆಂಗಳೂರಿನ ಬಿಎಸಿಯಲ್ಲಿ ಅಕ್ಟೋಬರ್ 19ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇನ್ನು ಈ ಎಲ್ಲಾ ಈಜುಪಟುಗಳು ಬೆಂಗಳೂರಿನ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ನಿಹಾರ್ ಅಮೀನ್ ಇವರ ಮಾರ್ಗದರ್ಶನದಲ್ಲಿ ಹಾಗೂ ಮಧು ಬಿ.ಎಮ್ ಇವರ ನೇತೃತ್ವದಲ್ಲಿ ಕೋಚ್‌ಗಳಾದ ಲೋಕರಾಜ್ ವಿಟ್ಲ, ಯಜ್ಞೇಶ್ ಬೆಂಗ್ರೆ ಮತ್ತು ಉಮೇಶ್ ವಿಟ್ಲ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿ ವನ್ ಅಕ್ವಾ ಸೆಂಟರ್‌ನ ನಿರ್ದೇಶಕರಾದ ನವೀನ್ ಪಡೀಲ್ ಮತ್ತು ರೂಪ ಪ್ರಭು ಅವರು ಸಹಕಾರವನ್ನು ನೀಡಿದ್ದಾರೆ.

 

Related Posts

Leave a Reply

Your email address will not be published.