ರಾಮಸೇನೆಗೆ ಸಾಮೂಹಿಕ ರಾಜೀನಾಮೆ
ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೇಕಲ್ಲುರವರು, ಸಂಘಟನೆಯ ರಾಜ್ಯ ಪ್ರ. ಕಾರ್ಯದರ್ಶಿಯವರ ಮಾತಿನಿಂದ ಬೇಸತ್ತು ಸಂಘಟನೆಗೆ ಒಂದು ವಾರದಿಂದ ಹಿಂದೆಯೇ ರಾಜೀನಾಮೆ ನೀಡಿದ್ದಾರೆ.
ಆದರೇ ಸಂಘಟನೆಯ ರಾಜ್ಯ ನಾಯಕರು ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕಿಸದೆ ಇರುವುದು. ಹಾಗೂ ಜಿಲ್ಲಾಧ್ಯಕ್ಷರ ಮನವೋಳಿಕೆಗೆ ಪ್ರಯತ್ನಿಸದಿರುದನ್ನು ಮನಗಂಡು ಶ್ರೀ ರಾಮಸೇನೆಯ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅತೀವಾ ನೋವಿನಿಂದ ಸಂಘಟನೆಗೆ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ. ಹಾಗೂ ಉಡುಪಿ ಜಿಲ್ಲಾ ಶ್ರೀ ರಾಮಸೇನೆಯನ್ನು ಬರ್ಖಸ್ತು ಮಾಡುತ್ತಿರುವುದಾಗಿ ಸಂಘಟನೆಯ ಜಿಲ್ಲಾ ವಕ್ತಾರ ಶರತ್. ಕೆ ಮಣಿಪಾಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ