ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಗೆ ರೈಫಲ್ ಕ್ಲಬ್ 8 ಮಂದಿ ಸ್ಪರ್ಧಿಗಳು ಭಾಗಿ : ಮುಖ್ಯ ಕೋಚ್ ಮುಖೇಶ್ ಕುಮಾರ್
64 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಗೆ ಮಂಗಳೂರು ರೈಫಲ್ ಕ್ಲಬ್ನ ಎಂಟು ಮಂದಿ ಶೂಟರ್ಗಳು ಪ್ರತಿನಿಧಿಸಲಿದ್ದಾರೆ ಎಂದು ಮುಖ್ಯ ಕೋಚ್ ಮುಖೇಶ್ ಕುಮಾರ್ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 2021 ರಲ್ಲಿ ಸ್ಮಾಲ್ ಬೋರ್ ರೈಫಲ್ ಈವೆಂಟ್ಗಳನ್ನು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾವು ಎಂಪಿ ಸ್ಟೇಟ್ ಶೂಟಿಂಗ್ ಅಕಾಡೆಮಿ ಶೂಟಿಂಗ್ ರೇಂಜ್ಗಳು, ಗೋರೆಗಾಂವ್, ಭೋಪಾಲ್ನಲ್ಲಿ ನವೆಂಬರ್ 25 ರಿಂದ ಡೀಸೆಂಬರ್ 10 ರ ವರೆಗೆ ಡಾ. ಕರ್ನಿ ಸಿಂಗ್ ಶೂಟಿಂಗ್ ಅಕಾಡೆಮಿ ನವದೆಹಲಿಯಲ್ಲಿ ಡಿಸೆಂಬರ್ 6ರ ವರೆಗೆ ನಡೆಯಲಿದೆ. ಇಬ್ಬರು ಪಿಸ್ತೂಲ್ ಶೂಟರ್ ಮತ್ತು ಆರು ಮಂದಿ ರೈಫಲ್ ಶೂಟರ್ಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಝಹೀರ್, ಸಂದೇಶ್ ಉಪಸ್ಥಿತರಿದ್ದರು.