ರೂಫಿಂಗ್ ಶೀಟ್ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ರಾಡ್ ಹಾಗೂ ಟೈಲ್ಸ್ನಿಂದ ಹಲ್ಲೆ
ಮಂಜೇಶ್ವರ: ಆವರಣ ಗೋಡೆಯನ್ನು ಕಬಳಿಸಿ ಮನೆ ಸಮೀಪದ ರೋಯಲ್ ಆರ್ಕೆಡ್ ಭಾವ ಹಿಂದೂಸ್ಥಾನಿ ಕಟ್ಟಡಕ್ಕೆ ರೂಫಿಂಗ್ ಶೀಟ್ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿದ್ದ ತಂಡ ತಂದೆ ಹಾಗೂ ಅಪ್ರಾಪ್ತ ಬಾಲಕನಿಗೆ ರಾಡ್ ಹಾಗೂ ಟೈಲ್ಸ್ ತುಂಡುಗಳಿಂದ ಹಲೆಗೈದ ಘಟನೆ ನಡೆದಿದೆ. ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ವಾಸವಾಗಿರುವ ಅಬ್ದುಲ್ ರಶೀದ್ (46) ಹಾಗೂ ಪುತ್ರ ರಾಯಿಫ್ (16) ಹಲ್ಲೆಗೊಳಗಾಗಿದ್ದಾರೆ. ಇವರನ್ನು ಬಳಿಕ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಬ್ದುಲ್ ರಶೀದ್ ರವರ ಮನೆಯ ಆವರಣ ಗೋಡೆಯನ್ನು ಕಬಳಿಸಿ ರೂಫಿಂಗ್ ಶೀಟ್ ಹಾಕತ್ತಿರುವುದನ್ನು ಪ್ರಶ್ನಿಸಿದಕ್ಕೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತಿದ್ದ ಕಾರ್ಮಿಕರ ತಂಡ ಹಲೆಗೈದಿರುವುದಾಗಿ ದೂರಲಾಗಿದೆ. ಇದನ್ನು ನೋಡಿ ತಡೆಯಲು ಬಂದ ರಾಶಿದ್ ಪುತ್ರ ರಾಯಿಫ್ ನಿಗೂ ತಂಡ ರಾಡ್ ಹಾಗೂ ಟೈಲ್ಸ್ ನಿಂದ ಹಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದ್ದು ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.