ರೆ. ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಗಾರ್ಡ್‌ನ್ ಲೋಕಾರ್ಪಣೆ
ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ವಿದೇಶಿ ಮಿಷನರಿಗಳು ಸಲ್ಲಿಸಿದ ಸೇವೆಗಳು ಸ್ಮರಣೀಯ. ಇದಕ್ಕೆ ಪೂರಕವಾಗಿ ದೇಶೀಯ ಸಭಾ ಪಾಲಕರುಗಳು ಸಭಾ ಪ್ರಾಂತ್ಯದ ಅಭಿವೃದ್ಧಿಗಾಗಿ ಸಭಾ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರಲ್ಲಿ ರೆ. ಜಾರ್ಜ್ ಎ. ಬೆರ್ನಾಡ್ ಕೂಡ ಒಬ್ಬರು. ಇಂಥವರನ್ನು ಸ್ಮರಿಸಿ ಇವರ ಹೆಸರಿನಲ್ಲಿ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ಮುಖಾಂತರ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸೆಂಟ್ರಲ್ ಡಯಾಸಿಸ್‌ನ ಬಿಷಪ್ ರೆ.ಡಾ.ಪಿ.ಕೆ.ಸ್ಯಾಮುವೆಲ್ ಹೇಳಿದರು.
ಅವರು ಮಂಗಳೂರಿನ ಬಲ್ಮಠ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಇವರ ಮೂಲಕ ನಿರ್ಮಾಣಗೊಂಡ ರೆ.ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಗಾರ್ಡನ್ ಅನ್ನು ಲೋಕಾರ್ಪಣೆಗೊಳಿಸಿದರು.ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಎಚ್.ಎನ್. ವಾಟ್ಸನ್ ಶುಭಹಾರೈಸಿದರು, ಬೆರ್ನಾಡ್ ಕುಟುಂಬಸ್ಥರಿಗೆ ಕೃತಜ್ಞತೆ ಅರ್ಪಿಸಿದರು. ಬರ್ನಾಡ್ ಕುಟುಂಬದ ಪರವಾಗಿ ಎಚ್.ವಸಂತ ಬರ್ನಾಡ್ ಅಭಿಪ್ರಾಯ ಮಂಡಿಸಿದರು. ಅತಿಥಿಗಳಾಗಿ ಮುಂಬಯಿಯ ಯುಬಿಎಂ ಚರ್ಚ್ ಕೌನ್ಸಿಲ್‌ನ ಅಧ್ಯಕ್ಷ ವಿಶಾಲ್ ಶಿರಿ, ಯುವ ನಾಯಕ ಮಿಥುನ ರೈ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಕೆಟಿಸಿಯ ಪ್ರೊ.ರೆ.ಡಾ. ಫ್ರೆಡ್ರಿಕ್ ಅನಿಲ್‌ಕುಮಾರ್, ರೆ. ಡಾ. ಅನಿ ವಾಟ್ಸನ್, ಹೆಬಿಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನ ಪ್ರಾಂಶುಪಾಲ ಆರ್. ಚೇತನ್, ಬಲ್ಮಠ ಪ್ರೆಸ್ಸಿನ ಮ್ಯಾನೇಜರ್ ರಾಲ್ಫ್ ಕೋಟ್ಯಾನ್, ಬೆಂಗಳೂರು ಡಯಾಸಿಸ್‌ನ ಸಪ್ನಾ ಅಮ್ಮನ್ನ, ಮತ್ತಿತರರು ಉಪಸ್ಥಿತರಿದ್ದರು.ಕೇ.ಟಿ.ಸಿ.ಯ ರೆ. ಸಾಗರ್ ಸುಂದರರಾಜ್ ಕಾರ್ಯಕ್ರಮ ನಿರೂಪಿಸಿದರು.ಮೊದಲಿಗೆ ಕೆಟಿಸಿ ವಿದ್ಯಾರ್ಥಿಗಳಿಂದ ದೇವರ ಸ್ತುತಿ ಗೀತೆ ಹಾಡಿದರು. ನೂತನ ಉದ್ಯಾನವನದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬರ್ನಾಡ್ ಅವರ ಮಗಳಾದ ಐರಿನ್ ಪುಷ್ಪ, ಐಮನ್ ಸಸಿ ನೆಡುವ ಮೂಲಕ ಹೂದೋಟಕ್ಕೆ ಚಾಲನೆ ನೀಡಿದರು.