ಲ್ಯಾಂಡ್ ಲಿಂಕ್ಸ್ ಪ್ರದೇಶದ ಜನರ ಬಹುದಿನಗಳ ಬೇಡಿಕೆ ಈಡೇರಿಕೆ : ನರ್ಮ್ ಬಸ್‍ಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ

ಮಂಗಳೂರಿನ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಬಸ್ ಓಡಾಟದ ಕನಸು ನನಸಾಗಿದೆ. ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನರ್ಮ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ನೌಕರಿಗೆ ಹೋಗುವ ಜನರಿಗೆ ಅನುಕೂಲವಾದ ಸಮಯದಲ್ಲಿ ನರ್ಮ್ ಬಸ್ ಸಂಚಾರ ಅವಕಾಶ ನೀಡಲಾಗಿದೆ. ಪ್ರತೀ 45 ನಿಮಿಷಕ್ಕೆ ನರ್ಮ್ ಬಸ್ ಓಡಾಟ ನಡೆಸಲಿದೆ. ಇದೀಗ ಪ್ರಾಯೋಗಿಕವಾಗಿ ಸಮಯದಲ್ಲಿ ಓಡಾಟ ನಡೆಸಲಿದೆ. ಬಳಿಕ ಜನರ ಬೇಡಿಕೆ ತಕ್ಕಂತೆ ಸಮಯ ಬದಲಾವಣೆ ಮಾಡಲಾಗುವುದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಮೂಲಕ ಸರಕಾರಿ ಬಸ್ ನಿರಂತರವಾಗಿ ಓಡಾಟ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ನೀರುಮಾರ್ಗ, ವಾಮಂಜೂರು, ಮೂಡುಶೆಡ್ಡೆ ಸಹಿತ ಗ್ರಾಮಾಂತರ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ನರ್ಮ್ ಬಸ್ ಓಡಿಸಲಾಗುವುದು ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಡಿಸಿ ಅರುಣ್, ಎಸ್.ಎಸ್ ಡಿಟಿಒ ಎಚ್. ಆರ್. ಕಮಲ್ ಕುಮಾರ್, ಕಾರ್ಪೋರೇಟರ್ ರಂಜಿನಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.