ವಾರಾಂತ್ಯದ ಕರ್ಫ್ಯೂನಿಂದ ಆರ್ಥಿಕ ನಷ್ಟ ಅನುಭವಿಸಿದ್ದೇವೆ : ಬೆಳ್ತಂಗಡಿಯಲ್ಲಿ ವರ್ತಕರ ಸಂಘದ ಅರವಿಂದ ಕಾರಂತ್ ಹೇಳಿಕೆ

ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 64 ರಿಂದ65ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ ಕೈಗಾರಿಕಾ ಸಂಘದ ಅಡಿಯಲ್ಲಿ ಬರುವ ವರ್ತಕರು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೇವೆ. ಆ ನಂತರ ಜಿಲ್ಲಾಧಿಕಾರಿಗಳು ಮಾಡಿರುವ ವಾರಾಂತ್ಯದ ಕರ್ಪ್ಯುನಿಂದಾಗಿ ಅಂಗಡಿ ಮಾಲಕರಾದ ನಾವು ಆರ್ಥಿಕ ನಷ್ಟವನ್ನು ಅನುಭವಿಸಿದ್ದೇವೆ. ಅಲ್ಲದೆ ನೂರಾರು ನೌ ಕರರು ಕೆಲಸವನ್ನು ಕಳೆದು ಕೊಂಡು ಕಂಗಾಲಾಗಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್ ಹೇಳಿದರು.

ಅವರು ಬೆಳ್ತಂಗಡಿ ಯಲ್ಲಿ ಮಾದ್ಯಮದ ಜೊತೆಗೆ ಮಾತನಾಡಿದ ಅವರು ರಾಜಕೀಯ ಸಭೆ, ಅಭಿನಂದನಾ ಸಭೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಸರಕಾರಕ್ಕೆ ಎಲ್ಲಾ ರೀತಿಯ ತೆರಿಗೆಯನ್ನು ನೀಡಿ ಸಮಾಜದ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ವರ್ತಕರ ಮೇಲೆ ಯಾಕಾಗಿ ನಿರ್ಭಂದ ,ಈ ನಿಟ್ಟಿನಲ್ಲಿ ವಾರತ್ಯದಲ್ಲಿ ಕರ್ಪ್ಯೂ ಮತ್ತು ಲಾಕ್ ಡೌನ್ ಅನ್ನು ಮುಂದಿನ ವಾರದಿಂದ ಮುಂದುವರಿಸಬಾರಾದಾಗಿ ಸರಕಾರಕ್ಕೂ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಮೂಲಕ ನಾವು ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಅಬೂಬಕರ್,ಲಕ್ಷ್ಮಣ ಗೌಡ,ರಾಜೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.