ವಿಟ್ಲದಲ್ಲಿ ವಾರಾಂತ್ಯದ ಕರ್ಪ್ಯೂ ಯಶಸ್ವಿ
ವಿಟ್ಲ: ಜಿಲ್ಲಾಡಳಿತ ಆದೇಶ ನೀಡಿದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಯಶಸ್ವಿಯಾಗಿದೆ. ವಿಟ್ಲದ ನಾಲ್ಕು ರಸ್ತೆಗಳಲ್ಲಿ ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ ನೇತೃತ್ವದಲ್ಲಿ ಪ್ರೊಬೆಷನರಿ ಎಸೈ ಮಂಜುನಾಥ ಮತ್ತು ಪೊಲೀಸರ ತಂಡ ನಾಕಾಬಂಧಿ ಅಳವಡಿಸಿದ್ದರು.
ಹಾಲು ಮತ್ತು ಮೆಡಿಕಲ್ ಹೊರತುಪಡಿಸಿ, ಅನಗತ್ಯವಾಗಿ ಪೇಟೆಗೆ ಬಂದ ವಾಹನಗಳನ್ನು ಮುಟ್ಟುಗೋಲು ಹಾಕಲಾಯಿತು. ವಿಟ್ಲ ಪೇಟೆಯಲ್ಲಿ ಜನಸಂಚಾರ, ವಾಹನಗಳಿಲ್ಲದೇ ಬಿಕೋ ಎನ್ನುತ್ತಿದ್ದು, ಪೇಟೆ ಸಂಪೂರ್ಣ ಸ್ತಬ್ಧಗೊಂಡಿದೆ.