ವಿಟ್ಲ ಅಜ್ಜಿನಡ್ಕದಲ್ಲಿ ಹೊಂಡಕ್ಕೆ ಉರುಳಿದ ಕಾರು
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯಲ್ಲಿರುವ ಹೊಂಡಕ್ಕೆ ಉರುಳಿದ ಘಟನೆ ವಿಟ್ಲ ಸಮೀಪದ ಅಜ್ಜಿನಡ್ಕ ಎಂಬಲ್ಲಿ ಸಂಭವಿಸಿದೆ.
ಬೈರಿಕಟ್ಟೆಯಿಂದ ಉಕ್ಕುಡ ಮೂಲಕ ಪುಣಚ ಕಡೆಗೆ ತೆರಳುತ್ತಿದ್ದ ವೇಳೆ ಅಜ್ಜಿನಡ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದು ಮನೆಯೊಂದರ ಅಂಗಳದಲ್ಲಿರುವ ಹೊಂಡಕ್ಕೆ ಉರುಳಿ ಬಿದ್ದಿದೆ. ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.