ವಿಠ್ಠಲ್ ಭಟ್ ಅವರಿಗೆ ನುಡಿ ನಮನ ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಹಾಗೂ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿ ಸ್ವರ್ಗಸ್ತರಾದ ವಿಠ್ಠಲ್ ಭಟ್ ಅವರಿಗೆ ನುಡಿ ನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವು ಹೆಜಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಜೇಷ್ಠ ಪ್ರಚಾರಕ ದಾ. ಮ. ರವೀಂದ್ರ ಮಾತನಾಡುತ್ತಾ ವಿಠ್ಠಲ ಭಟ್ಟರ ಸಮಾಜ ಸಮರ್ಪಿತ ಜೀವನವು ಪ್ರತಿಯೊಬ್ಬರಿಗೂ ಅನುಕರಣೀಯ ಎಂದರಲ್ಲದೆ ಅವರು ದೈವಭಕ್ತಿ ಮತ್ತು ದೇಶಭಕ್ತಿಯ ಪ್ರತೀಕ ಎಂದರು.
ಪಡುಬಿದ್ರಿಯ ಆಯುರ್ವೇದಿಕ್ ವೈದ್ಯ ಡಾ. ಎನ್ ಟಿ ಅಂಚನ್, ಆರೆಸ್ಸಿಸಿನ ಹಿರಿಯ ಸ್ವಯಂಸೇವಕರ ಪಾಂಗಾಳ ಪಾಂಡುರಂಗ ಶ್ಯಾನುಭಾಗ್ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಗಡಿಯಾರ್ ವಿಠ್ಠಲ ಭಟ್ಟರ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಪ್ರಾಂತ ಶಾರೀರಿಕ್ ಪ್ರಮುಖ ಸತೀಶ್ ಕುತ್ಯಾರ್, ಪ್ರಾಂತ ಕಾರ್ಯಕಾರಿಣಿ ಸದಸ್ಯ ಮನೋಹರ್, ಮಂಗಳೂರು ವಿಭಾಗ ಪ್ರಚಾರಕರಾದ ಸುರೇಶ್. ಉಡುಪಿ ಜಿಲ್ಲಾ ಸಹ ಕಾರ್ಯವಾಹ ಕಿಶೋರ್ ಎಲ್ಲೂರು, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಹೆಜಮಾಡಿ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಕರ್ಕೇರ, ಬಿಜೆಪಿ ಸ್ಥಾನೀಯ ಅಧ್ಯಕ್ಷ ಶರಣ್ ಮಟ್ಟು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸುಧಾಕರ ಕರ್ಕೇರ, ಮಾಜಿ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಮುಂತಾದವರು ಉಪಸ್ಥಿತರಿದ್ದರು. ಸುರೇಶ್ ಹೆಜಮಾಡಿಯವರು ಕಾರ್ಯಕ್ರಮ ನಿರ್ವಹಿಸಿದರು.