ವಿಪರೀತ ಬೆಲೆಯೇರಿಕೆಯಿಂದ ದೇಶದ ಜನರ ಬದುಕು ತತ್ತರ- ಸುನೀಲ್‌ ಕುಮಾರ್ ಬಜಾಲ್

ಲಾಕ್ಡೌನ್ ಅವಧಿಯಲ್ಲಿ ಜನಸಾಮಾನ್ಯರಿಗೆ ಉದ್ಯೋಗವಿಲ್ಲದೆ , ವ್ಯಾಪಾರವಿಲ್ಲದೆ ಬದುಕು ನಡೆಸಲು ಅಸಾಧ್ಯವಾಗದಂತಹ ಪರಿಸ್ಥಿಯಲ್ಲಿರುವಾಗ ನಮ್ಮನ್ನಾಳುವ ಕೇಂದ್ರ ಸರಕಾರ ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಸಹಿತ, ಗೃಹ ಉಪಯೋಗಿ ವಸ್ತಗಳ ವಿಪರೀತ ಬೆಲೆಯೇರಿಕೆಯಿಂದ ದೇಶದ ಜನರ ಬದುಕು ತತ್ತರಗೊಂಡಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಪೆಟ್ರೋಲ್, ಡೀಸಲ್, ಗ್ಯಾಸ್ ದರ ಏರಿಕೆಯನ್ನು ಖಂಡಿಸಿ ಸಿಪಿಐಎಂ ಮಂಗಳೂರು ನಗರ ಸಮಿತಿಯಿಂದ ನಡೆಸಲ್ಪಡುವ ವಾರಾಚರಣೆಯ ಉದ್ಘಾಟನೆಯ ಭಾಗವಾಗಿ ಪಕ್ಕಲಡ್ಕದಲ್ಲಿ ಜರುಗಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಯಂತಿ ಬಿ ಶೆಟ್ಟಿಯವರು ಅಣಕು ಒಲೆಗೆ ಬೆಂಕಿ ಹಚ್ಚಿ ಬಿಸಿ ನೀರು ಕಾಯಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಐಎಂ ಕಂಕನಾಡಿ ಬಿ ಶಾಖೆಯ ಕಾರ್ಯದರ್ಶಿ ಉದಯ ಕುಂಟಲಗುಡ್ಡೆ, ಸ್ಥಳೀಯ CPIM ಯುವ ನಾಯಕರಾದ ದೀಪಕ್ ಬಜಾಲ್, ಧೀರಾಜ್, ನೂರುದ್ದೀನ್, ಮಧುವಂತ್, ಪ್ರಥ್ವಿ, ಸೋನಿಲ್, ಅಶೋಕ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.