ವಿಭಿನ್ನವಾಗಿ ಮಾಡಿ ಅಥವಾ ವಿಭಿನ್ನವಾದುದನ್ನು ಮಾಡಿ-ವೇಣು ಶರ್ಮ

ಬದಲಾವಣೆ ಎನ್ನುವುದು ಕಷ್ಟಕರ ಮತ್ತು ಪ್ರತಿರೋಧ ಪೂರಿತವಾಗಿದ್ದರೂ ಅದು ಪ್ರಕೃತಿ ಸಹಜ ಹಂತ. ತಿಕ್ಕಾಡುವ ಬದಲು ಅಭಿವೃದ್ಧಿಯತ್ತ ಮುಖಮಾಡಿದಾಗ ಬದಲಾವಣೆ ಸುಲಭ. ದೂರವಾಣಿ ಸಂಪರ್ಕ ಕಂಪೆನಿಗಳಿಂದ ಹಿಡಿದು ಪ್ರತೀ ಮನೆ – ಕುಟುಂಬಗಳಲ್ಲಿ ನಾವು ಮರೆತಿರುವ ದಿನಚರಿಯೂ ಕೂಡಾ ನಮಗೆ ಹೊಸತನ್ನು ನೀಡಿದೆ. ಪರಿವರ್ತನೆ ಅನ್ನುವುದು ನಮ್ಮ ಅಂತರಾತ್ಮದಿಂದ ಪ್ರಾರಂಭಗೊಂಡಾಗ ಮಾತ್ರ ಜಗತಿಗೆ ಧನಾತ್ಮಕತೆಯನ್ನು ಪಸರಿಸಲು ಸಾಧ್ಯ ಎಂಬುದಾಗಿ ಮೈ ಅಂತರಾತ್ಮ ಮತ್ತು ಆಡ್ ಐಡಿಯಾ ಸಂಸ್ಥೆಗಳ ಸಂಸ್ಥಾಪಕ ಹಾಗೂ ಮಹಾ ನಿರ್ದೇಕರಾಗಿರುವ ವೇಣು ಶರ್ಮ ತಿಳಿಸಿದರು.

ಮಂಗಳಾ ಆಲುಮ್ನಿ ಅಸೋಸಿಯೇಶನ್ (ಮಂಗಳೂರು ವಿಶ್ವನಿದ್ಯಾನಿಲಯದ ಹಳೆ ವಿದ್ಯಾರ್ಥಿ ಸಂಘ) ಮಂಗಳೂರು ವಿಶ್ವನಿದ್ಯಾನಿಲಯ ಮತ್ತು ವಿಶ್ವನಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳು ಜಂಟಿಯಾಗಿ “Change is Changing – Post Covid Perspective” ಎಂಬ ವಿಷಯದಲ್ಲಿ ಆಯೋಜಿಸಿದ ವೆಬಿನಾರ್‌ನಲ್ಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತಮ್ಮ ಮಾತಿನಲ್ಲಿ ತಂತ್ರಜ್ಞಾನದ ಪ್ರಚಂಡ ಬದಲಾವಣೆಗಳು, ಅವಿನಾಶಿ-ಕೃಷಿ, ಅಸಂಘಟಿತ ವಲಯಗಳ ಪರಿವರ್ತನೆ, ಯುವಪಿಳಿಗೆಗೆ ಸವಾಲೆಸೆದ ಕೃತಕ ಬುದ್ದಿಮತ್ತೆ, ಮುದ್ರಣದಿಂದ ಡಿಜಿಟಲ್ ರೂಪಕ್ಕೆ ಪಯಣಿಸಿದ ಮಾಧ್ಯಮ – ಇವೆಲ್ಲದರ ಪರಿಣಾಮವಾಗಿ ಕಾರ್ಪೋರೆಟ್ ಜಗತಿನಲ್ಲಿ ಉಧ್ಬವಿಸಿದ ಅದ್ಭುತ ವಾಣಿಜ್ಯ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳೊಡನೆ ಅವರು ಸುದೀರ್ಘ ಮಾತುಕತೆಯನ್ನು ನಡೆಸಿದರು.

ಗೌರವ ಉಪಸ್ಥಿಯಲ್ಲಿ ಮಾತನಾಡಿದ ಮಂಗಳಾ ಆಲುಮ್ನಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಶ್ರೀ ದಿನೇಶ್ ಕುಮಾರ್ ಆಳ್ವ ಅವರು ಪರಿವರ್ತನೆಗಾಗಿ ಅಗತ್ಯವಿರುವ ಸನ್ನದತೆಯನ್ನು ಒತ್ತಾಯಿಸಿ ಇಂತಹ ವೆಬಿನಾರ್‌ಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆಯಿತ್ತರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ 2023ರ ವೇಳೆಗೆ ನಾವು ವಿಭಿನ್ನವಾದ ಸೂರ್ಯೊದಯವನ್ನು ಹೊಸ ಬಣ್ಣಗಳ ಕಾಮನಬಿಲ್ಲಿನೊಂದಿಗೆ ಕಾಣಲಿದ್ದೇವೆ. ಇದು ನಮ್ಮಲ್ಲಿ ಬದಲಾಗುತ್ತಿರುವ ಫಾರ್ಮ್ಯುಲಾ, ವರ್ತನೆ, ಸ್ಥಿತಿಸ್ಥಾಪಕತ್ವ ಹಾಗೂ ಹೊಂದಿಕೊಳ್ಳುವಿಕೆಯಿಂದ ಸಾಧ್ಯವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

 


ತುಳು ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ ಕೆ ಎಲ್ಲರನ್ನೂ ಸ್ವಾಗತಿಸಿದರು. ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವಾದಾಸ ಪೈ, ಕ್ರಿಯಾತ್ಮಾಕ ಬದಲಾವಣೆಯ ಬಗ್ಗೆ ಪ್ರಾಸ್ಥವಿಕ ಭಾಷಣವಿತ್ತರು. ಮಂಗಳಾ ಆಲುಮ್ನಿ ಅಸೋಸಿಯೇಶನ್ ಕಾರ್ಯದರ್ಶಿ ಡಾ. ಗಣೇಶ್ ಸಂಜೀವ್ ಅತಿಥಿಗಳನ್ನು ಪರಿಚಯಿಸಿದರು. ಎಂ.ಕಾಂ ಮತ್ತು ಎಂ.ಬಿ.ಎ (ಐಬಿ) ವಿಭಾಗದ ಸಂಯೋಜಕರಾಗಿರುವ ಡಾ. ಜಗದೀಶ ಬಿ ವಂದಾನರ್ಪಣೆಗೈದರು. ತಾಂತ್ರಿಕ ನೆರವನ್ನು ಕಾರ್ಯಕ್ರಮ ಸಂಯೋಜಕರಾದ ಶ್ರೀ ವೆಂಕಟೇಶ ನಾಯಕ್ ನಿರ್ವಹಿಸಿದರು. ಸಂಯೋಜಕ ಶ್ರೀ ಸ್ಟೀವನ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.