ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಸಿಪಿಐ(ಎಂ) ಮತ್ತು ಸಿಪಿಐನಿಂದ ಪ್ರತಿಭಟನೆ

ಕರ್ನಾಟಕ ರಾಜ್ಯವ್ಯಾಪಿ ಮನೆ, ಮನೆ, ಸರ್ಕಾರಿ ಕಛೇರಿ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲು ಏಳು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕರೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ ಪಿ ಐ(ಎಂ)ಮತ್ತು ಸಿ ಪಿ ಐ ಪಕ್ಷಗಳು ಜಂಟಿಯಾಗಿ ನೀಡಿದ ಕರೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳ ಸದಸ್ಯರು ಮನೆ ಮನೆಗಳಲ್ಲಿ ಪ್ರದರ್ಶನ ನಡೆಸಿ ಸರ್ಕಾರಗಳ ನೀತಿಗಳನ್ನು ಬದಲಾಯಿಸಲು ಒತ್ತಾಯಿಸಿದರು.

 

ಸಿಪಿಐ(ಎಂ)ನ ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ನೇತೃತ್ವದಲ್ಲಿ ಮನೆ ಮನೆ ಪ್ರತಿಭಟನೆ ನಡೆಸಿದರು. ಸಾರ್ವತ್ರಿಕ ಉಚಿತ ಲಸಿಕೆ, ಔಷಧಿ, ಚಿಕಿತ್ಸೆಗಾಗಿ, ನೇರ ನಗದಿಗಾಗಿ, ಉಚಿತ ಪಡಿತರಕ್ಕಾಗಿ, ರೈತರು, ಕಾರ್ಮಿಕರ ವಿರೋಧಿ ಕಾನೂನುಗಳ ರದ್ದತಿ, 200ದಿನಗಳ ಉದ್ಯೋಗ ಖಾತರಿಗಾಗಿ, ನಗರಗಳಿಗೂ ವಿಸ್ತರಣೆಗಾಗಿ, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಒತ್ತಾಯಿಸುವ ಭಿತ್ತಿಪತ್ರಗಳನ್ನು ಹಿಡಿದು ಪ್ರದರ್ಶನ ನಡೆಸಲಾಯಿತು.

ಜಿಲ್ಲೆಯ ಮಂಗಳೂರು, ಉಳ್ಳಾಲ, ಗುರುಪುರ, ಮೂಡುಬಿದ್ರಿ, ಬಂಟ್ವಾಳ, ಬೆಳ್ತಂಗಡಿ, ಸುಳ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ -ರಾಜ್ಯ ಸರಕಾರಗಳ ವಿಪಲತೆಯಿಂದಾಗಿ ಅಮಾಯಕ ಜನತೆಯು ಕೊರೋನಾಗೆ ಬಲಿಯಾಗುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Related Posts

Leave a Reply

Your email address will not be published.