ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನಲ್ಲಿ ಉಚಿತ ಲಸಿಕೆ ವಿತರಣೆ
ಮಂಗಳೂರಿನ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನ ಕೇಬಲ್ ಆಪರೇಟರ್ ಹಾಗೂ ಸಿಬ್ಬಂದಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಯೆಯ್ಯಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ| ಸುಷ್ಮಾ ಜಾಸ್ಮಿನ್ ಅವರು ಚಾಲನೆ ನೀಡಿದ್ರು. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಆರೋಗ್ಯ ಇಲಾಖೆ , ಮಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ನಡೆದ ಲಸಿಕೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ರು.
ಈ ಸಂದರ್ಭ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನ ನಿರ್ದೇಶಕರಾದ ಜಿತೇಂದ್ರ ರಾವ್, ಪ್ರವೀಣ್.ಟಿ.ಮಯ್ಯ , ಗೌರೀಶ್ ರೈ, ರಣದೀಪ್ ಕಾಂಚನ್, ಶ್ರೀನಿವಾಸ್ ಸಿ.ಕಿಣಿ, ವಿಶ್ವಾಶ್ ಕುಮಾರ್ ದಾಸ್, ಹರೀಶ್ ಶೆಟ್ಟಿ, ಜನರಲ್ ಮ್ಯಾನೇಜರ್ ಲೈನಲ್ ನೊರೋನ್ಹಾ, ದಾದಿಯರುಗಳಾದ ಭಾರತೀ, ದಿವ್ಯಾ, ಮಾಲತಿ, ಆಶಾಕಾಯಕರ್ತೆರಾದ ಮಾಲತಿ, ರೇಖಾ,ಸೇರಿದಂತೆ ವಿ೪ ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನ ಕೇಬಲ್ ಆಪರೇಟರ್ ಸಿಬ್ಬಂದಿಗಳು ಪಾಲ್ಗೊಂಡಿದ್ರು.ರಣದೀಪ್ ಕಾಂಚನ್ ,ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನ ನಿರ್ದೇಶಕರು ವಿಶ್ವಾಶ್ ಕುಮಾರ್ ದಾಸ್, ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನ ನಿರ್ದೇಶಕರು ಶ್ರೀನಿವಾಸ್ ಸಿ.ಕಿಣಿ, ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನ ನಿರ್ದೇಶಕರು ಉಪಸ್ಥಿತರಿದರು.