ವಿ4 ಸ್ಟ್ರೀಮ್‌ನಲ್ಲಿ ತೆರೆಕಂಡ ಟು ಆಂಡ್ ಮೀ ತುಳು ಸಿನಿಮಾಕ್ಕೆ ಪ್ರೇಕ್ಷಕರು ಫಿದಾ

ಟು ಆಂಡ್ ಮೀ ಹೆಸ್ರು ಹೇಳುವ ಹಾಗೆ ಇದೊಂದು ಡಿಫರೆಂಟ್ ಮೂವಿ… ಎಲ್.ಎಸ್. ಮೀಡಿಯಾ ಬ್ಯಾನರಡಿಯಲ್ಲಿ ಮೂಡಿ ಬಂದಿದೆ. ಸ್ವರಾಜ್ ಶೆಟ್ಟಿ ಬಹುಭಾಷಾ ಸಿನಿಮಾದಲ್ಲಿ ನಟಿಸಿದ್ದರೂ ಅವರ ಮೊದಲ ನಿರ್ದೇಶನದಲ್ಲಿ ತೆರೆಕಂಡ ಸಿನಿಮಾ ಇದಾಗಿದೆ. ಈಗಾಗಲೇ ವಿ4 ಸ್ಟ್ರೀಮ್‌ನ ಓಟಿಟಿಯಲ್ಲಿ ರಿಲೀಸ್ ಆಗಿರುವ ಟು ಆಂಡ್ ಮೀ ತುಳು ಮೂವಿಗೆ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ ಸಿಕ್ಕಿದೆ. ಇಬ್ಬರ ಹುಡುಗಿಯರ ನಡುವೆ ಒಬ್ಬ ಪ್ರೇಮಿ ಎನ್ನುವ ಕಥಾ ಹಂದರ ಹೊಂದಿರುವ ಚಿತ್ರವು ಬಹಳ ರೋಚಕ ತಿರುವು ಹೊಂದಿರುವ ಮೂವಿ ಆಗಿದೆ.

ನಟ ಸ್ವರಾಜ್ ಶೆಟ್ಟಿ ಜೊತೆಗೆ ಮೊಟ್ಟ ಮೊದಲ ಬಾರಿಗೆ ಇಬ್ಬರು ನಾಯಕ ನಟಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ತೇಜಸ್ವಿ ಮತ್ತು ದೀಶಾ ಪುತ್ರನ್ ಅವರು ಮೊಟ್ಟ ಮೊದಲ ಬಾರಿಗೆ ಈ ಚಿತ್ರದಲ್ಲೇ ಸೈ ಎನ್ನಿಸಿಕೊಂಡಿದ್ದಾರೆ. ವಿನೋದ್‌ರಾಜ್ ಕೊಕೀಲಾ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಇನ್ನುಳಿದಂತೆ ರಜಿತ್ ಕದ್ರಿ, ನಿತೇಶ್, ನಮಿತಾ ಅವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಂಜುನಾಥ ಪ್ರಸಾದ್ ಮತ್ತು ನಾಗರಾಜ್ ಅವರ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ. ಡೆರಿಲ್ ಡಿಸಿಲ್ವಾ ಅವರ ಸಂಕಲನ ಈ ಚಿತ್ರಕ್ಕಿದೆ. ಸಹಾಯಕ ನಿರ್ದೇಶಕರಾಗಿ ರಜಿತ್ ಕದ್ರಿ ಮತ್ತು ಪವನ್ ಪೂವಯ್ಯ, ಸಂದೇಶ ಶೆಟ್ಟಿ ಸಹಕಾರವನ್ನು ಕೊಟ್ಟಿದ್ದಾರೆ. ವಿಜಯಕುಮಾರ್ ಕೊಡಿಯಾಲ್‌ಬೈಲ್, ಕೀರ್ತನ್ ಭಂಡಾರಿ ಮತ್ತು ರಕ್ಷಣ್ ಮಾಡೂರು ಅವರು ಈ ಚಿತ್ರಕ್ಕೆ ಸಾಹಿತ್ಯವನ್ನು ನೀಡಿದ್ದಾರೆ. ಗ್ರಾಫಿಕ್ ಡಿಸೈನರ್ ಆಗಿ ಸಿದ್ಧಾರ್ಥ ಕೊಟ್ಟಾರಿ, ಆಶೀಶ್ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. ಎಸ್‌ಎಫ್‌ಎಕ್ಸ್‌ನಲ್ಲಿ ಸನತ್ ಬಳ್ಕೂರು, ನೃತ್ಯ ನಿರ್ದೇಶಕರಾಗಿ ಸೋರ್ನ ಅವರು ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಇನ್ನು ಟು ಆಂಡ್ ಮೀ ಪಕ್ಕಾ ಲವ್ ಸ್ಟೋರಿ ಹಾಗೂ ಫ್ರೆಂಡ್ ಶಿಪ್ ಚಿತ್ರ ಆಗಿದ್ದು, ಸ್ವರಾಜ್ ಶೆಟ್ಟಿ ನಟರಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಇಬ್ಬರು ನಟಿಯರು ಲೀಡ್ ಕ್ಯಾರೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಟು ಆಂಡ್ ಮೀ ತುಳು ಸಿನಿಮಾ ವಿ4 ಸ್ಟ್ರೀಮ್ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ವಿ4 ಸ್ಟ್ರೀಮ್ ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆಯಾಗುತ್ತಿರುವ ಸಿನಿಮಾ ಇದಾಗಿದೆ.

 

Related Posts

Leave a Reply

Your email address will not be published.