ವೀರಮಂಗಲದಲ್ಲಿ ರೈಲ್ವೇ ಹಳಿಗೆ ಧರೆ ಕುಸಿತ: ರೈಲು ಸಂಚಾರ ಸ್ಥಗಿತ

ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ.ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ-ಏಕಿ ಧರೆ ಕುಸಿದಿದ್ದು, ಮಣ್ಣು ರೈಲಿನ ಮುಂಭಾಗಕ್ಕೆ ಕುಸಿದಿದ್ದು ರೈಲಿನ ಗಾರ್ಡ್ ಗೆ ಹಾನಿಯಾಗಿದೆ.ರೈಲು ಹಳಿಯಲ್ಲಿ ಬಾಕಿಯಾಗಿದ್ದು,ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮಣ್ಣು ತೆರವು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Related Posts

Leave a Reply

Your email address will not be published.