ವೃತ್ತಿಪರ ಕೋರ್ಸ್ಗೆ ಸಿಇಟಿ ಅಂಕ ಮಾನದಂಡ : ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ
ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾಗುವ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಆಗಸ್ಟ್ 28 ಹಾಗೂ ಆಗಸ್ಟ್ 29ರಂದು ಸಿಇಟಿ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಇಂದು ನಡೆದ ಸಭೆ ಬಳಿಕ ಮಾತನಾಡಿದ ಅವರು, ಜೂನ್ 15ರಿಂದ ಸಿಇಟಿ ನೋಂದಣಿ ಆರಂಭವಾಗಲಿದೆ. ಆಗಸ್ಟ್ 28 ಹಾಗೂ ಆಗಸ್ಟ್ 29ರಂದು ಸಿಇಟಿ ನಡೆಯಲಿದ್ದು, ಮೊದಲ ದಿನ ಗಣಿತ, ಜೀವಶಾಸ್ತ್ರ ಪರೀಕ್ಷೆಗಳು ನಡೆಯುತ್ತದೆ. ಎರಡನೇ ದಿನ ರಸಾಯನಶಾಸ್ತ್ರ, ಭೌತಶಾಸ್ತ್ರ ಪರೀಕ್ಷೆ ನಡೆಯಲಿದೆ. 3ನೇ ದಿನ ಆಗಸ್ಟ್ 30ರಂದು ಗಡಿನಾಡ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು. ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಅಂಕಗಳನ್ನು ಈ ವರ್ಷ ಪರಿಗಣಿಸದಿರಲು ನಿರ್ಧರಿಸಲಾಗಿದೆ. ಈ ವರ್ಷಕ್ಕೆ ಅನ್ವಯವಾಗುವಂತೆ ಕೇವಲ ಸಿಇಟಿ ರ್ಯಾಂಕ್ ಆಧಾರದಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶ ನಡೆಯಲಿದೆ. ಪಿಯುಸಿ ಅಂಕ ಪರಿಗಣಿಸುವುದಿಲ್ಲ. ಹಾಗೆಯೇ ಈ ಸಂಬಂಧ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮಂಡಳಿಗಳಿಗೂ ಪತ್ರ ಬರೆಯಲಾಗುತ್ತದೆ ಎಂದರು.ಆಗಸ್ಟ್ 28 ಮತ್ತು 29ರಂದು ಸಿಇಟಿ ನಡೆಯಲಿದೆ. ವೃತ್ತಿಪರ ಕೋರ್ಸ್ ಗೆ ಸಿಇಟಿ ರ್ಯಾಂಕ್ ಮಾತ್ರ ಪರಿಗಣಿಸಲು ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದರು. ಅದರಂತೆ ಅಧಿಕಾರಿಗಳ ಜತೆ ಚರ್ಚಿಸಿ, ಈ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.