ಶಾಸಕ ಡಾ. ವೈ ಭರತ್ ಶೆಟ್ಟಿ ಅವರಿಂದ 3.96 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿಪೂಜೆ
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಮರಕಡ 14ನೇ ವಾರ್ಡಿನಲ್ಲಿ ವಿಮಾನ ನಿಲ್ದಾಣ ರಸ್ತೆಗೆ ತಡೆ ಗೋಡೆ ಹಾಗೂ ಫುಟ್ ಪಾತ್ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿತು. ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಎಫ್. ಎ .ಆರ್ ನಿಧಿಯಿಂದ ಮತ್ತು ಸಾಮಾನ್ಯ ನಿಧಿಯಿಂದ 3.96 ಕೋಟಿ ಅನುದಾನದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಉಪಮೇಯರ್ ಸುಮಂಗಲ ರಾವ್ , ಪಾಲಿಕೆ ಸದಸ್ಯರಾದ ಲೋಹಿತ್ ಅಮೀನ್, ಶರತ್ ಕುಂಜತ್ ಬೈಲ್ , ಬಿಜೆಪಿ ಮಂಗಳೂರು ಉತ್ತರದ ಅಧ್ಯಕ್ಷರಾದ ತಿಲಕ್ ರಾಜ ಕೃಷ್ಣಾಪುರ, ಪಕ್ಷದ ಪ್ರಮುಖರಾದ ಕಿಶೋರ್ ರೈ, ಹರೀಶ್ ಶೆಟ್ಟಿ ಪ್ರೇಮಾನಂದ ರಾವ್, ಗೌತಮ್ ಬಾಯಾಡಿ ,ಮಲ್ಲಿಕಾ, ಸಪ್ನ ,ವೀಣಾ,ಶ್ವೇತಾ , ಯಶವಂತ್ ,ಸುನಿಲ್ ,ಚಂದ್ರಶೇಖರ್, ನಾರಾಯಣ ,ನಿತೇಶ್ ಶ್ರೀನಿವಾಸ್ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.