ಶ್ರೀನಿವಾಸ್ ಆರೋಗ್ಯ ಕಾರ್ಡ್ ಬಿಡುಗಡೆ ಸಮಾರಂಭ

 ಶ್ರೀನಿವಾಸ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಶ್ರೀನಿವಾಸ್ ಆರೋಗ್ಯ ಕಾರ್ಡ್ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ| ಸಿಎ ಎ ರಾಘವೇಂದ್ರ ರಾವ್ ಅವರು ಉದ್ಘಾಟಿಸಿದರು.  ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ- ಕುಲಾಧಿಪತಿಗಳಾದ ಡಾ | ಶ್ರೀನಿವಾಸ್ ಎ ರಾವ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಡಾ| ಉದಯ್ ಕುಮಾರ್ ರಾವ್, ಡೀನ್, ಶ್ರೀನಿವಾಸ್ ಮೆಡಿಕಲ್ ಕಾಲೇಜು ಇವರು ಅತಿಥಿಗಳನ್ನು ಸ್ವಾಗತಿಸಿ, ಅತಿಥಿಗಳಿಗೆ ಸಸ್ಯವನ್ನು ವಿತರಿಸಲಾಯಿತು. ಡಾ| ಅಮಿತ್ ಕಿರಣ್ ಇವರು ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳನ್ನು ತಿಳಿಸಿ, ಡಾ| ಅನಿತಾ ಇವರು ಶ್ರೀನಿವಾಸ್ ಆರೋಗ್ಯ ಕಾರ್ಡ್‌ನ ಸೌಲಭ್ಯಗಳನ್ನು ಸಭೆಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಗಣ್ಯರಿಗೂ ಹಾಗೂ ಮುಖಂಡರಿಗೂ ಸನ್ಮಾನಿಸಲಾಯಿತು. ಶ್ರೀಮತಿ. ವಿಜಯಲಕ್ಷ್ಮೀ ರಾವ್ ನಿರ್ದೆಶಕರು ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಸ್; ಶ್ರೀಮತಿ ಮಿತ್ರ ಎಸ್ ರಾವ್ ಕಾರ್ಯದರ್ಶಿ ಎ. ಶಾಮ ರಾವ್ ಫೌಂಡೇಶನ್ ಮಂಗಳೂರು; ಶ್ರೀ ಆದಿತ್ಯ ಕುಮಾರ್ ಮಯ್ಯ ರಿಜಿಸ್ಟ್ರಾರ್ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಂಗಳೂರು ಪೋಲೀಸ್ ಕಮಿಷನರ್ ಆದ ಶ್ರೀ ನಟರಾಜ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀನಿವಾಸ್ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕರಾದ ಡಾ| ಡೇವಿಡ್ ಡಿ ಎಮ್ ರೊಸಾರಿಯೋ ಇವರು ಧನ್ಯವಾದ ಸಮರ್ಪಣೆಗೈದರು. ವೈಶಾಖ್ ಕುಮಾರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

 

Related Posts

Leave a Reply

Your email address will not be published.