ಶ್ರೀನಿವಾಸ್ ಹೋಟೆಲ್ ಮ್ಯಾನೇಜ್‍ಮೆಂಟ್ ಕಾಲೇಜು : ವಿಶಿಷ್ಟ ಪಠ್ಯಕ್ರಮಕ್ಕೆ ಹೆಚ್ಚು ಒತ್ತು

ಶ್ರೀನಿವಾಸ ಹೋಟೆಲ್ ಮ್ಯಾನೇಜ್‍ಮೆಂಟ್ ಕಾಲೇಜು ಯುವ ಪೀಳಿಗೆಗೆ, ಬದಲಾಗುತ್ತಿರುವ ಮತ್ತು ಸವಾಲಿನ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಲು ಸಾಕಷ್ಟು ಸ್ಪರ್ಧಾತ್ಮಕವಾಗುವಂತೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತಿದೆ. ಎ. ಶ್ಯಾಮರಾವ್ ಫೌಂಡೇಶನ್ ಅಡಿಯಲ್ಲಿ 1988ರಲ್ಲಿ ಸ್ಥಾಪನೆಗೊಂಡ ಈ ಕಾಲೇಜನ್ನು 2017ರಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸಲಾಯಿತು, ಇದು ವಿದ್ಯಾರ್ಥಿಗಳಿಗೆ ಮತ್ತು ವಿಶಿಷ್ಟ ಪಠ್ಯಕ್ರಮಕ್ಕೆ ಹೆಚ್ಚು ಒತ್ತು ನೀಡುತ್ತಿದೆ.

ನಮ್ಮ ಕಾಲೇಜು ಭಾರತದಲ್ಲಿ ಎಲ್ಲಿಯೂ ಕಾಣದ ವಿಶಿಷ್ಟ ಕೋರ್ಸನ್ನು ನೀಡುತ್ತಿದೆ.ಕೋರ್ಸ್‍ನ ಪ್ರಯೋಜನವೆಂದರೆ ಹೋಟೆಲಿಯರ್ ಆಗಬೇಕೆಂಬ ಆಸೆ, ಕನಸು ಹಾಗೂ ಉತ್ಸಾಹವನ್ನು ಹೊಂದಿರುವ, ಪಿಯುಸಿ/+2ರಲ್ಲಿ ತೇರ್ಗಡೆಯಾದಯಾವುದೇ ಸ್ಟ್ರೀಮ್‍ನ ವಿದ್ಯಾರ್ಥಿಗಳನ್ನು ಸ್ವೀಕರಿಸುತ್ತದೆ. ನಮ್ಮ ಅನುಭವಿ ಪ್ರಾಧ್ಯಾಪಕರ ಮೂಲಕ ಪ್ರತಿ ವಿದ್ಯಾರ್ಥಿಯನ್ನು ಅತ್ಯಂತ ಪ್ರಾಯೋಗಿಕ ಆಧಾರದ ಮೇಲೆ ಕಲಿಸಲು ಮತು ್ತತರಬೇತಿ ನೀಡಲು ಕೋರ್ಸ್ ಖಾತರಿ ನೀಡುತ್ತದೆ.
ನಮ್ಮ ವಿಶ್ವವಿದ್ಯಾಲಯವು ವಿಶಿಷ್ಟ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ. ನಾವು ಏಕಮಾತ್ರ ಅಥವಾ ಅನನ್ಯಎಂದು ಏಕೆ ಹೇಳುತ್ತೇವೆ ?ಏಕೆಂದರೆ:

ಬ್ಯಾಚುಲರ್‍ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತುಕ್ಯಾಟರಿಂಗ್ ಟೆಕ್ನಾಲಜಿ: ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮವು ಪ್ರಸ್ತುತ ಆತಿಥ್ಯ ಉದ್ಯಮದ ಅವಶ್ಯಕತೆಗೆ ಸಮನಾಗಿರುತ್ತದೆ ಮತ್ತು ಪ್ರಾಯೋಗಿಕ ಆಧಾರಿತ ವಿಷಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಉದ್ಯಮಕ್ಕೆ ವಿದ್ಯಾರ್ಥಿಗಳನ್ನು ತಯಾರಿಸಲು, ಕೋರ್ಸ್‍ನ ಎರಡು ಸೆಮಿಸ್ಟರ್‍ಗಳಲ್ಲಿ ಕೈಗಾರಿಕಾ ತರಬೇತಿಯನ್ನು ನೀಡುತ್ತದೆ, ಅಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಉದ್ಯಮದೊಂದಿಗೆ ಪರಿಚಿತರಾಗುತ್ತಾರೆ ಹಾಗೂ ವ್ಯವಸ್ಥಾಪಕ ಮಟ್ಟದಲ್ಲಿ ಇಲಾಖೆಯನ್ನು ನೇರವಾಗಿ ನಿರ್ವಹಿಸಲು ತರಬೇತಿ ಪಡೆಯುತ್ತಾರೆ. ಬಿ.ಎಸ್ಸಿ ಹೋಟೆಲ್ ಮ್ಯಾನೇಜ್ಮೆಂಟ್ ಏವಿಯೇಷನ್, ಟ್ರಾವೆಲ್ ಮತ್ತುಟೂರಿಸಂ: ಮೂರು ವರ್ಷಗಳ ಪದವಿಪೂರ್ವ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿಮಾನಯಾನ ಮಾನದಂಡಗಳಿಗೆ ತರಬೇತಿ ನೀಡುತ್ತದೆ, ಏಕೆಂದರೆಕೋರ್ಸ್‍ಅತ್ಯಂತ ವಿಶಿಷ್ಟವಾದ ಪ್ರಾಯೋಗಿಕ ಆಧರಿತ ವಿಷಯಗಳನ್ನು ನೀಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ವ್ರತ್ತಿಜೀವನದ ಆಯ್ಕೆಗಳಾಗಿ ಏರ್ಲೈನ್ಸ್‍ಅಥವಾ ಹೋಟೆಲನ್ನುಆಯ್ಕೆ ಮಾಡುವ ಅನುಕೂಲವನ್ನು ಹೊಂದಿದ್ದಾರೆ.

ಬಿ.ಎಸ್ಸಿ (ಹೋಟೆಲ್ ಮ್ಯಾನೇಜ್ಮೆಂಟ್): ಮೂರುವರ್ಷದ ಪದವಿಪೂರ್ವ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಹೊಸ ತಲೆಮಾರಿನ ಹೋಟೆಲಿಯರ್‍ಗಳನ್ನಾಗಿ ಮಾಡಲು ಸಿದ್ಧಪಡಿಸುತ್ತದೆ. ಕೋರ್ಸ್ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಮೇಲ್ವಿಚಾರಣಾ ಮಟ್ಟದಲ್ಲಿ ಹೋಟೆಲ್ ಉದ್ಯಮಕ್ಕೆ ಸೇರಲು ಅವಕಾಶವನ್ನು ನೀಡುತ್ತದೆ.

ಹೋಟೆಲ್ ಮತ್ತು ಪ್ರವಾಸೋದ್ಯಮ ನಿರ್ವಹಣೆಯಲ್ಲಿ ಎಂ.ಬಿ.ಎ:ಉದ್ಯಮದ ಭವಿಷ್ಯದ ವ್ಯವಸ್ಥಾಪಕರಾಗಲು ಬಯಸುವವರಿಗೆಎರಡು ವರ್ಷಗಳ ಸ್ನಾತಕೋತ್ತರಕೋರ್ಸ್. ಕಲಿಸಿದ/ಕಲಿತ ವಿಷಯಗಳು ಆ ಗುರಿಯನ್ನುತಲುಪಲು ಏನು ತೆಗೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.ವ್ಯವಸ್ಥಾಪಕ ಮಟ್ಟದ ವಿಷಯಗಳನ್ನು ಕಲಿಯುವುದರಿಂದ ಅಭ್ಯರ್ಥಿಗಳು ಹೋಟೆಲ್‍ನಯಾವುದೇ ವಿಭಾಗವನ್ನು ಅರ್ಥಮಾಡಿಕೊಳ್ಳಲು ಮತ್ತು ನಡೆಸಲು ಸಿದ್ಧರಾಗುತ್ತಾರೆ.

ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಅನೇಕ ಕೌಶಲ್ಯಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ಸಂಘಟಿಸುತ್ತದೆ. ಉದಾಹರಣೆಗೆ ವಿದ್ಯಾರ್ಥಿಗಳೇ ಆಯೋಜಿಸುವ ಕಾರ್ಯಾಗಾರಗಳು, ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳು ಇತ್ಯಾದಿ. ಸಂಶೋಧನಾ ಕಾರ್ಯಕ್ರಮಗಳು, ಉದ್ಯಮಶೀಲತಾ ಅಭಿವೃದ್ಧಿಕಾರ್ಯಕ್ರಮ, ಅನುಭವಿ ಬೋಧಕರ ನೇತ್ರತ್ವದಲ್ಲಿ ವಿವಿಧ ಇಲಾಖೆಗಳು ನಡೆಸುವ ಸಂದರ್ಶನತರಬೇತಿ ಕಾರ್ಯಕ್ರಮಗಳ ಮೂಲಕವೂ ಅವರಿಗೆ ಜ್ಞಾನವನ್ನು ನೀಡಲಾಗುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಆನ್‍ಕ್ಯಾಂಪಸ್ ಮತ್ತು ಆಫ್‍ಕ್ಯಾಂಪಸ್ ಸಂದರ್ಶನಗಳ ಮೂಲಕ ಜಾಗತಿಕ ಬ್ರಾಂಡ್‍ಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಿ ಕೊಡಲಾಗಿದೆ ಎಂದು ನಮ್ಮ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗವು ಖಚಿತಪಡಿಸುತ್ತದೆ.ಈ ಕಾಲೇಜಿನಲ್ಲಿ ಪ್ರಪಂಚದಾದ್ಯಂತ ವಿವಿಧ ವ್ಯವಸ್ಥಾಪಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ವ್ಯಾಪಕಜಾಲವಿದೆ.ಇದು ಈ ಸಾಂಕ್ರಮಿಕ ಪರಿಸ್ಥಿತಿಯಲ್ಲೂ ನಮ್ಮ ವಿದ್ಯಾರ್ಥಿಗಳನ್ನು ಸುಲಭವಾಗಿ ಹೋಟೆಲ್‍ಉದ್ಯಮದವರು ಹೀರಿಕೊಳ್ಳಲು ಸಹಾಯಮಾಡುತ್ತದೆ ಹಾಗೂ ನಮ್ಮ ವಿದ್ಯಾರ್ಥಿಗಳು ಅನೇಕ ಬ್ರಾಂಡೆಡ್ ಸ್ಟಾರ್ ಹೋಟೆಲ್ ಗಳಲ್ಲಿ ಉದ್ಯೋಗಅವಕಾಶವನ್ನುಕೂಡ ಗಿಟ್ಟಿಸಿಕೊಂಡಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಹೋಟೆಲ್‍ಗಳು ನಮ್ಮಿಂದ ಹೆಚ್ಚಿನ ಅಭ್ಯರ್ಥಿಗಳನ್ನು ನಿರೀಕ್ಷಿಸುತ್ತಿವೆ.

1988ರಿಂದ ಮುಂಚೂಣಿಯಲ್ಲಿರುವ ದಿ ಕಾಲೇಜ್‍ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ಮತ್ತು ಟೂರಿಸಂ, ಆತಿಥ್ಯ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡುತ್ತಿದೆ. ಅದೇ ವ್ಯವಸ್ಥಿತ ಪ್ರಯತ್ನ ಇಂದಿಗೂ ಮುಂದುವರೆದಿದೆ ಮತ್ತು ಯಾವುದೇ ಹೋಟೆಲ್ ಬೇಡಿಕೆಯಿರುವ ಅತ್ಯುತ್ತಮ ಹೋಟೆಲಿಗರನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ.

Related Posts

Leave a Reply

Your email address will not be published.