ಶ್ರೀನಿವಾಸ ವಿವಿಯ ಕಾಲೇಜ್ ಆಫ್ ಕಾಮರ್ಸ್ & ಮ್ಯಾನೇಜ್‌ಮೆಂಟ್: ವಿಶ್ವ ಪರಿಸರ ದಿನ ಆಚರಣೆ
ಶ್ರೀನಿವಾಸ ವಿಶ್ವವಿದ್ಯಾಲಯ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ವತಿಯಿಂದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ವರ್ಚುವಲ್ ವೇದಿಕೆಯ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಬಿ.ಕಾಂ. ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾಪಾಡುವುದು, ಸಸಿಗಳನ್ನು ನೆಡುವುದನ್ನು ವೀಡಿಯೋ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಯಿತು. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡರು.
ವಿದ್ಯಾರ್ಥಿಗಳಿಗೆ ಶ್ರೀನಿವಾಸ್ ವಿವಿಯ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್‌ನ ಡೀನ್ ಪ್ರೊ. ಕೀರ್ತನ್ ರಾಜ್ ಅವರ ಮಾರ್ಗದರ್ಶನದೊಂದಿಗೆ ಬಿ.ಕಾಂ. ಪದವಿ ಕೋರ್ಸ್‌ನ ಸಂಯೋಜಕಿ ಪ್ರೊ. ಶರ್ಮಿಳಾ ಎಸ್. ಶೆಟ್ಟಿ, ಬಿಬಿಎ ಪೋರ್ಟ್ ಮ್ಯಾನೇಜ್‌ಮೆಂಟ್‌ನ ಪದವಿ ಕೋರ್ಸ್‌ನ ಸಂಯೋಜಕಿ ಡಾ. ಸೋನಿಯಾ ನೊರೊಹ್ನಾ, ಬಿಬಿಎ ವಿಭಾಗದ ಸಂಯೋಜಕ ಪ್ರೊ. ನೆಲ್ಸನ್ ಪಿರೇರಾ, ಎನ್‌ಎಸ್‌ಎಸ್ ವಿಭಾಗದ ಸಂಯೋಜಕಿ ಪ್ರೊ. ಶಿಲ್ಪಾ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.