ಶ್ರೀನಿವಾಸ ವಿವಿ ವತಿಯಿಂದ ಕ್ಯಾಂಪಸ್ ಸಂದರ್ಶನ

ಕೋವಿಡ್‍ನ ಈ ಸಂಕಷ್ಟದ ಕಾಲದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕ್ಯಾಂಪಸ್ ಸಂದರ್ಶನಕ್ಕೆ ಅತ್ಯಂತ ಮಹತ್ವ ನೀಡಿದ್ದು, ಪ್ರಥಮ ವರ್ಷದಿಂದ ಅಂತಿಮ ವರ್ಷದ ವಿದಯಾರ್ಥಿಗಳಿಗೆ ಆನ್‍ಲೈನ್ ಮತ್ತು ಆಫ್ ಲೈನ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳನ್ನು ಉದ್ಯೋಗಕ್ಕಾಗಿ ಸಿದ್ದರಾಗುವಂತೆ ತಯಾರು ಮಾಡಿ ಯಶಸ್ಸನ್ನು ಕಂಡಿದ್ದೇವೆ ಎಂದು ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ ತರಬೇತಿ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ, ಪ್ರೊ. ಡಾ. ನೇತ್ರಾವತಿ ಹೇಳಿದರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣವನ್ನು ತನ್ನ ಮುಖ್ಯ ಧೈಯವನ್ನಾಗಿಸಿಕೊಂಡಿರುವ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಶ್ರೀನಿವಾಸ್ ವಿಶ್ವವಿದ್ಯಾಲಯವು ಕಳೆದೆರಡು ವರ್ಷಗಳ ಕೋರೊನಾ ಸಂಕಷ್ಟದ ನಡುವೆಯೂ ಮುಕ್ಕ ಮತ್ತು ಮಂಗಳೂರಿನ ಎರಡೂ ಶಾಖೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಯಶಸ್ವಿಯಾಗಿ ನಡೆಸಿರುತ್ತೇವೆ. ಸುಮಾರು 180 ಉದ್ಯೋಗ ಸಂಸ್ಥೆಗಳು 300ಕ್ಕೂ ಹೆಚ್ಚು ಹುದ್ದೆಗಳಿಗಾಗಿ ಆನ್‍ಲೈನ್ ಮುಖಾಂತರ ಸಂದರ್ಶನ ನಡೆಸಿರುತ್ತೇವೆ ಎಂದು ಹೇಳಿದರು.

ಆನಂತರ ಶ್ರೀನಿವಾಸ್ ವಿಶ್ವವಿದ್ಯಾಲಯದ ತರಬೇತಿ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ,ಪೆÇ್ರ. ವರುಣ್ ಶೆಣೈ ಅವರು ಮಾತನಾಡಿ, ಈ ಸಂದರ್ಶನದಲ್ಲಿ ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಕಾಮರ್ಸ್, ಹಾಗೂ ಗಣಕ ಯಂತ್ರ ವಿಜ್ಞಾನ ವಿಷಯಗಳಲ್ಲಿ ತೇರ್ಗಡೆಯಾದವರಿಗೆ ವಾರ್ಷಿಕ ವರಮಾನ 3.5 ಲಕ್ಷದಿಂದ 17 ಲಕ್ಷದ ವರೆಗೆ ವೇತವನ್ನು ಹಾಗೂ ಪಿಸಿಯೋಥೆರಫಿ ಮತ್ತು ಆರೋಗ್ಯ ವಿಜ್ಞಾನ ವಿಷಯಗಳಲ್ಲಿ ತೇರ್ಗಡೆಯಾದವರಿಗೆ ವಾರ್ಷಿಕ ವರಮಾನ 24 ಲಕ್ಷದ ವರೆಗೆ ವೇತನವನ್ನು ನೀಡಿರುತ್ತಾರೆ. ಕೋವಿಡ್‍ನ ಸಂಕಷ್ಟ ಕಾಲದಲ್ಲಿ ಈ ತರಬೇತಿಯು ವಿದ್ಯಾರ್ಥಿಗಳಿಗೆ ಉತ್ತಮ ವರದಾನವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಶನವನ್ನು ದೈರ್ಯದಿಂದ ಎದುರಿಸಲು ಆತ್ಮವಿಶ್ವಾಸವನ್ನು ತಂದುಕೊಟ್ಟಿರುವುದಲ್ಲೆ ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಗಳಿಕೆಯನ್ನು ಕೂಡ ಗಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದ ತರಬೇತಿ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ ಪ್ರೊ . ಸಂಜಯ್, ಮೀಡಿಯಾ ಇನ್‍ಚಾರ್ಜ್ ಪ್ರೊ . ಅಶ್ವಿನಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.