ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಸೆ.17ರಂದು  ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ

ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಕೀರ್ಣದಲ್ಲಿ ದಿನಾಂಕ 17.09.2021 ರಂದು ಪೂರ್ವಾಹ್ನ9.೦೦ ಗಂಟೆಯಿಂದ ಮೂರನೇ ಸಾಲಿನ ಕೋವಿಡ್ ಲಸಿಕೆ ವಿತರಣಾಕಾರ್ಯಕ್ರಮ (ಪ್ರಥಮ ಹಾಗೂ ದ್ವಿತೀಯಡೋಸ್) ನಡೆಯಲಿದೆ. ಶ್ರೀನಿವಾಸ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಆಸಕ್ತ ಅಭ್ಯರ್ಥಿಗಳು ಆಧಾರ್‌ಕಾರ್ಡ್ ಹಾಗೂ ಪ್ರಥಮ ಲಸಿಕೆ ಪಡೆದಿದ್ದಲ್ಲಿ ಅದರ ಮಾಹಿತಿ ಪತ್ರವನ್ನು ಜೊತೆಗೆ ತಂದು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ವಿಶ್ವವಿದ್ಯಾನಿಲಯದ ಕುಲಪತಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Posts

Leave a Reply

Your email address will not be published.