ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆ “ಮಿಲನ್-2021

 ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿಲನ್ -2021 ಎನ್ನುವ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಂಪ್ರದಾಯಿಕ ಹಾಡು ಹಾಗೂ ನೃತ್ಯ ಕಾರ್ಯಕ್ರಮವನ್ನು ಎಲ್ಲಾರ ಗಮನ ಸೆಳೆದವು.


 ರಾಜ್ಯ ಹಾಗೂ ಮಂಗಳೂರು ನಗರದಲ್ಲೇ ಅತ್ಯುತ್ತಮ ಶಿಕ್ಷಣಕ್ಕೆ ಹೆಸ್ರು ಪಡೆದುಕೊಂಡಿರುವ ಮಂಗಳೂರಿನ ವಾಮಂಜೂರು ಪರಿಸರದಲ್ಲಿರುವ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿಲನ್ ಎನ್ನುವ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ ಮುಂಜಾನೆ ಮಿಲನ್ 2021 ಎನ್ನುವ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯ್ತು. ಇನ್ನು ಕಾಲೇಜಿನ ಪ್ರವೇಶದ್ವಾರದಲ್ಲಿ ವಿದ್ಯಾರ್ಥಿ ಸಮೂಹ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಷಯದಲ್ಲಿ ವಿನ್ಯಾಸಗೊಳಿಸಿದ ವರ್ಣರಂಜಿತ ಪೊಕಳಂ ಮೂಲಕ ಸ್ವಾಗತ ಕೋರಲಾಯ್ತು.

ಇನ್ನು ಹೂ ಗಳಿಂದ ಶೃಂಗಾರಗೊಳಿಸುವ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಶನಿವಾರ ಸಂಜೆ ನಡೆದ ಮಿಲನ್ 2021 ಎನ್ನುವ ಕಾರ್ಯಕ್ರಮದ ಅತಿಥಿಗಳನ್ನ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯ್ತು.ಕಾರ್ಯಕ್ರಮದಲ್ಲಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್‌ಗೌಡ, ತುಳು ಸಿನಿಮಾ ನಟ ಸತೀಶ್ ಬಂದಲೆ, ಮತ್ತು ಎನ್ನೆಸ್ಸೆಸ್ ಸ್ವಯಂ ಸೇವಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಮತ್ತು ಯಕ್ಷಗಾನ ಕಲಾವಿದೆ ಬಿಂದಿಯಾ ಶೆಟ್ಟಿ ಅವರನ್ನ ಸನ್ಮಾನಿಸಲಾಯ್ತು.


ಈ ವೇಳೆ ಮಾತನಾಡಿದ ಬಿಂದಿಯಾ ಶೆಟ್ಟಿ ಅವರು,ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶಗಳನ್ನು ನೀಡುವ ಮಿಲನ್‌ನಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕಾಲೇಜಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ತದ ಬಳಿಕ ನಟ ಸತೀಶ್ ಬಂದಲೆ ಮಾತನಾಡಿದ ಅವರು, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು ಮತ್ತು ನಟನಾ ಕ್ಷೇತ್ರದಲ್ಲಿನ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿ ತಮ್ಮ ಪರಿಣತಿಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಇನ್ನು ಮಿಲನ್ -2021ರಲ್ಲಿ ವಿವಿಧ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಕಲಾ ವೈಭವ, ಮುಖವರ್ಣಿಕ , ರಂಗೋಲಿ, ಬೆಂಕಿಯಿಲ್ಲದ ಅಡುಗೆ, ಟ್ಯಾಲೆಂಟ್ ಹಂಟ್ ಮತ್ತು ಛಾಯಾಗ್ರಹಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಯನ್ನ ಆಯೋಜನೆ ಮಡಲಾಗಿತ್ತು. ಇದರಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ನೀಡಿ, ಗೌರವಿಸಿದ್ರು.,


ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ವಿಲ್ಫೇಡ್ ಪ್ರಕಾಶ್ ಡಿಸೋಜಾ, ಸಹನಿರ್ದೇಶಕ ಆಲ್ವಿನ್ ರಿಚರ್ಡ್ ಡಿಸೋಜಾ, ಪ್ರಾಂಶುಪಾಲರಾದ ಡಾ|ರಿಯೋ ಡಿಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೋ, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದರು. ಕಾರ್ಯಕ್ರಮವನ್ನು ರಚನಾ ಕ್ರಾಸ್ತಾ ಮತ್ತು ಅಶ್ವಿನ್ ಶೆಟ್ಟಿ ಸಂಘಟನಾ ತಂಡದ ಇತರ ಸದಸ್ಯರೊಂದಿಗೆ ಸಂಯೋಜಿಸಿದರು ವಿದ್ಯಾರ್ಥಿಗಳಿಂದ ಹಾಡು, ನೃತ್ಯ ಕಾರ್ಯಕ್ರಮ , ಕಾಲೇಜಿನ ವಿದ್ಯಾರ್ಥಿಗಳಿಂದ ಹುಲಿ ನೃತ್ಯವು ದಿನದ ಇನ್ನೊಂದು ಪ್ರಮುಖ ಆಕರ್ಷಣೆಯಾಗಿತ್ತು. ಚೆಂಡೆ, ನಾಸಿಕ್ ಬ್ಯಾಂಡ್ ಮತ್ತು ಡಿಜೆ ಸೇರಿತ್ತು.. ಇನ್ನು ಸಾಂಸ್ಕೃತಿಕ ವೈವಿಧ್ಯತೆ “ಮಿಲನ್-2021೧” ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ತೆರೆಕಂಡಿತು.

Related Posts

Leave a Reply

Your email address will not be published.