ಸಂಸ್ಕಾರ ಭಾರತೀ ಆಶ್ರಯದಲ್ಲಿ ಕ್ರಾಂತಿಸೂರ್ಯ ಭಗತ್ ಸಿಂಹ ಯಕ್ಷಗಾನ

ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಕಲೆ ಮತ್ತು ಸಾಹಿತ್ಯಕ್ಕಾಗಿ ಸಮರ್ಪಿತವಾದ ರಾಷ್ಟ್ರೀಯ ಸಂಘಟನೆಯಾದ ಮಂಗಳೂರು ಸಂಸ್ಕಾರ ಭಾರತೀಯ ಆಶ್ರಯದಲ್ಲಿ ನವೆಂಬರ್ 28 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಕ್ರಾಂತಿಸೂರ್ಯ ಭಗತ ಸಿಂಹ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪುರುಷೋತ್ತಮ ಕೆ. ಭಂಡಾರಿ ಅಡ್ಯಾರು ತಿಳಿಸಿದರು.


ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ನಡೆಸಿ ಮಾತನಾಡಿ, 23ರ ಹರೆಯದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ ಸಿಂಹ್ ಅವರ ಜೀವನಚರಿತ್ರೆಯ ಈ ಯಕ್ಷಗಾನವನ್ನು ಪ್ರಸಂಗರೂಪದಲ್ಲಿ ಪ್ರಸಾದ್ ಮೊಗೆಬೆಟ್ಟು ಅವರು ರಚಿಸಿದ್ದು, ಈ ಯಕ್ಷಗಾನ ಪ್ರದರ್ಶನದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷರಾದ ಚಂದ್ರಶೇಖರ ಕೆ. ಶೆಟ್ಟಿ, ಸಹ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ವಿಭಾಗ ಸಂಚಾಲಕರಾದ ಮಾಧವ ಭಂಡಾರಿ, ಪ್ರಚಾರ ಪ್ರಮುಖ್ ಸುಜೀರ್, ವಿನೋದ ಉಪಸ್ಥಿತರಿದ್ದರು.

Related Posts

Leave a Reply

Your email address will not be published.